ನಂಜನಗೂಡು: ತಾಲೂಕಿನ ತಗಡೂರು ಗ್ರಾಮದಲ್ಲಿ ವಾತ್ಸಲ್ಯ ಫಲಾನುಭವಿ ಗೌರಮ್ಮ ಅವರಿಗೆ ವಾತ್ಸಲ್ಯ ಮನೆಯನ್ನು ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತಾಯ ಹಸ್ತಾಂತರ ಮಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ನೀಡಲಾಗುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಅಮ್ಮನವರ ಆಸೆಯಂತೆ ಆಸರೆ ಇಲ್ಲದ ಅಜ್ಜಿಗೆ ಒಂದು ಸೂರು ನೀಡಿ ಅಜ್ಜಿಯ ಕೊನೆಯ ಜೀವನವು ನೆಮ್ಮದಿಯಾಗಿ ಇರಬೇಕು.
ಈಗಾಗಲೇ ಹಲವು ಕಷ್ಟ ಕಾರ್ಪಣ್ಯ ಗಳನ್ನು ಅನುಭವಿಸಿದ್ದು ಮುಂದಿನ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಂತಹ ಮೈಸೂರು ಜಿಲ್ಲೆಯ ನಿರ್ದೇಶಕ ವಿಜಯಕುಮಾರ್ ನಾಗನಾಳ ಮಾತನಾಡಿ, ಗೌರಮ್ಮ ವಾತ್ಸಲ್ಯ ಮನೆ ನೆರಳಾಗಿರಲಿ ಹಾಗೂ ಅಕ್ಕ ಪಕ್ಕಕುಟುಂಬದವರು ಜನರು ಗೌರಮ್ಮ ನವರನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳಬೇಕು, ಮಂಜುನಾಥ ಸ್ವಾಮಿ ಹಾಗೂ ನಂಜುಂಡೇಶ್ವರ ಸ್ವಾಮಿಯ ಆಶೀರ್ವಾದ ಇರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಂಜನಗೂಡು ತಾಲೂಕು ಕ್ಷೇತ್ರ ಯೋಜನಾಧಿಕಾರಿ ಧರ್ಮರಾಜ್ ಕೆ. ಗ್ರಾಮ ಪಂಚಾಯತಿ ಸದಸ್ಯರಾದ ಮುದ್ದು ಮಾದಶೆಟ್ಟಿ, ಸಂಗೀತ ಮೇಲ್ವಿಚಾರಕ ಉದಯ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರಮಒಕ್ಕೂಟದ ಅಧ್ಯಕ್ಷರಾದ ಸುಮಾ, ಸುಬ್ಬಮ್ಮ ಹಾಗೂ ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು.