ಮೈಸೂರು: ನಾಡದೇವತೆ ಚಾಮುಂಡಿ ಬೆಟ್ಟಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ಹಾಗೂ ಮೈಸೂರು ರಾಜವಂಶಸ್ಥರ ಮಧ್ಯೆ ಜಟಾಪಟಿ ಶುರುವಾಗಿದೆ. ಹಲವು ವರ್ಷದಿಂದ ರಾಜಮನೆತನದವರು ದೇವಿಗೆ ಸಂಕಲ್ಪ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ಚಾಮುಂಡಿ ದೇವಾಲಯ ರಾಜಮನೆತನದ ಅವಿಭಾಜ್ಯ ಅಂಗವಾಗಿದೆ. ಆದರೆ ರಾಜ್ಯ ಸರ್ಕಾರ ಈ ದೇವಾಲಯಕ್ಕೆ ಸಂಬಂಧಿಸಿದಂತೆ ಹೊಸ ಅಧಿನಿಯಮ ಜಾರಿಗೆ ತರಲು ಮುಂದಾಗಿದೆ. ಸರ್ಕಾರದ ಈ ನಡೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಸರ್ಕಾರದ ಹೊಸ ಅಧಿನಿಯಮ ರದ್ದು ಮಾಡಬೇಕು ಎಂದು ಪ್ರಮೋದಾ ದೇವಿಯವರು ಮನವಿ ಮಾಡಿದ್ದಾರೆ.
ಇಂದು ವಿಚಾರಣೆ ಮಾಡಲಾಗಿದ್ದು, ಹೈಕೋರ್ಟ್ ಏಕಸದಸ್ಯ ಪೀಠದಿಂದ ರಾಜ್ಯ ಸರ್ಕಾರದ ನಡೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಚಾಮುಂಡೇಶ್ವರಿ ಆಸ್ತಿಗೆ ಕೈಹಾಕಿ ಮೂರೇ ತಿಂಗಳಲ್ಲಿ ಸಿಎಂಗೆ ಮುಡಾ ಹಗರಣ ಉರುಳಾಗಿತ್ತು.
ಕಾಯ್ದೆಯ ಸೆ.2(ಎ), 3,12(1), 14(3), 14(4), 16(1), 17(1), 20(1)(ಒ), 20(2) ಸಂಪೂರ್ಣ ಕಾನೂನು ಬಾಹಿರ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ರಾಜಮನೆತದ ಹೆಸರಲ್ಲಿ ಸಂಕಲ್ಪದಲ್ಲಿ ಮಾಡುತ್ತಿದ್ದ ಪೂಜೆಗೂ ಬ್ರೇಕ್ ಹಾಕಲಾಗಿದೆ.