ಮೈಸೂರು : ಭಾರಿ ಅಗ್ನಿ ಅನಾಹುತ ಸಂಭವಿಸಿದ ಘಟನೆ ಮೈಸೂರು ಜಿಲ್ಲೆಯಲ್ಲಿ ಹೆಚ್. ಡಿ. ಕೋಟೆಯ ಪಡುವನಕೋಟೆ ಗ್ರಾಮದಲ್ಲಿನ ಗ್ಯಾರೇಜ್ ನಲ್ಲಿ ನಡೆದಿದೆ. ಗ್ಯಾರೇಜ್ ನಲ್ಲಿದ್ದ 18 ದ್ವಿಚಕ್ರ ವಾಹನ ಹಾಗೂ 2 ಕಾರುಗಳು ಸುಟ್ಟು ಕರಕಲಾಗಿದೆ.
Ad
ಅಜಿತ್ ಎಂಬಾತನ ಗ್ಯಾರೇಜ್ ನಲ್ಲಿ ಬೆಂಕಿ ಕೆನ್ನಾಲಿಗೆ ವ್ಯಾಪಿಸಿದ್ದು , ನೋಡ ನೋಡ್ತಿದ್ದಂತೆ ಕಾರು ಹಾಗೂ ಬೈಕ್ ಗಳು ಬೆಂಕಿಗೆ ಆಹುತಿಯಾಗಿದೆ.ಎಲ್ಲವೂ ಸುತ್ತು ಕರಕಲಾಗಿದೆ.
Ad
ಸುದ್ದಿ ತಿಳಿದು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್. ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
Ad
Ad