Bengaluru 30°C

ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗಬೇಕು; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ

ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಮತ್ತು ಬೆಂಬಲ ಬೆಲೆ ಸಿಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿವೈ ವಿಜಯೇಂದ್ರ ಹೇಳಿದರು.

ನಂಜನಗೂಡು: ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಮತ್ತು ಬೆಂಬಲ ಬೆಲೆ ಸಿಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿವೈ ವಿಜಯೇಂದ್ರ ಹೇಳಿದರು. ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಭಜನಾ ಮೇಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸುತ್ತೂರು ಜಾತ್ರೆಯಲ್ಲಿ ಭಾಗವಹಿಸಲು ನನಗೆ ಹೆಮ್ಮೆ ಇದೆ. ಸಾಮಾಜಿಕ ವಿಶೇಷವಾಗಿ ನಾನು ಮತ್ತು ನನ್ನ ತಂದೆ ತಪ್ಪದೆ ಭಾಗವಹಿಸುತ್ತಿದ್ದೇವೆ.


ನಮ್ಮದು ಜಾತ್ರೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೇಶ ವಿದೇಶದಲ್ಲೂ ಸುತ್ತೂರು ಮಠ ಖ್ಯಾತಿ ಪಡೆದಿದೆ. ಶ್ರೀ ಕ್ಷೇತ್ರದಲ್ಲಿ ಅನ್ನದಾಸೋಹ, ಆರೋಗ್ಯ, ಶಿಕ್ಷಣ ಜ್ಞಾನದ ದಾಸೋಹವನ್ನು ನೀಡುತ್ತಾ ಬಂದಿದೆ. ವಿಜಯೇಂದ್ರ ನನ್ನು ಗುರುತಿಸಿರೋದು ವರುಣ ಕ್ಷೇತ್ರದ ಜನರು . ಅವರ ಪ್ರೀತಿಗೆ ನಾನು ಚಿರಋಣಿ. ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದಲ್ಲಿ ಸಡಗರ ಆಡಂಬರಕ್ಕೆ ಸೀಮಿತವಾಗದೆ ನಾಡಿನ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುತ್ತಿದೆ. ಗುಡಿ ಕೈಗಾರಿಕೆಗೆ ಹೆಚ್ಚು ಆದ್ಯತೆ ನೀಡಿದೆ. ರೈತರಿಗೆ ಈ ಜಾತ್ರೆಯು ತುಂಬಾ ಅನುಕೂಲವಾಗಿದೆ.


ಪ್ರಧಾನಿ ನರೇಂದ್ರ ಮೋದಿಯವರು ಸ್ವದೇಶಿ ವಸ್ತುಗಳ ಬಳಕೆ ಮಾಡಬೇಕು ಅವರು ಕರೆ ನೀಡಿದರು. ಅದರಂತೆ ಸುತ್ತೂರು ಜಾತ್ರೆಯಲ್ಲಿ ನಮ್ಮ ಜವಾಬ್ದಾರಿ ಅಲೆಮಾರಿ ಜನರು ಮತ್ತು ರೈತರು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆಧುನಿಕ ತಂತ್ರಗಾರಿಕೆ ಭರಾಟೆಯಲ್ಲೂ ಕೋಟಿ ಕೋಟಿ ಜನರು ಕುಂಭಮೇಳದಲ್ಲಿ ಭಾಗವಹಿಸಿ ಈ ದೇಶದ ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಸಮಯ ಕಡಿಮೆ ಇದೆ ಯಾರು ಕೂಡ ಸಮಯವನ್ನು ಮಾಡಬಾರದು ದೇಶದಲ್ಲಿ ರೈತರಿಗೆ ಉತ್ತಮ ಮಳೆ, ಬೆಳೆಯಾದರೆ ರೈತರು ಸಮೃದ್ಧಿಯಾಗುತ್ತಾರೆ‌ ಎಂದರು.


ಈ ಸಂದರ್ಭದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದ ವಹಿಸಿದ್ದರು. ಮೇಘಾಲಯದ ರಾಜ್ಯಪಾಲರಾದ ಸಿ.ಹೆಚ್. ವಿಜಯಶಂಕರ್, ಆರ್ ಎಸ್ಎಸ್ ಕಾರ್ಯವಾಹಕರಾದ ದತ್ತಾತ್ರೇಯ ಹೊಸಬಾಳೆ, ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


Nk Channel Final 21 09 2023