Bengaluru 20°C
Ad

ಉಪಟಳ ನೀಡುವ ಹುಲಿ ಸೆರೆಗೆ ರೈತರ ಆಗ್ರಹ

ಹೆಚ್.ಡಿ.ಕೋಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡು ತೊಂದರೆ ಕೊಡುತ್ತಿರುವ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿ ಪಟ್ಟಣದಲ್ಲಿರುವ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡು ತೊಂದರೆ ಕೊಡುತ್ತಿರುವ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿ ಪಟ್ಟಣದಲ್ಲಿರುವ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad

ಹೆಚ್.ಡಿ.ಕೋಟೆ ಪಟ್ಟಣದ ವ್ಯಾಪ್ತಿಯಲ್ಲಿ ಕಳೆದ ಮೂರು ನಾಲ್ಕು ತಿಂಗಳಿಂದ, ಬೋಚಿಕಟ್ಟೆ, ಕೆ.ಜಿ.ಹುಂಡಿ, ಹೆಬ್ಬಳ, ಸ್ಟೇಡಿಯಂ ಬಡಾವಣೆ, ಹಾಗೂ ಪಟ್ಟಣದ ಹೊರ ವಲಯದಲ್ಲಿ ಆಗಿಂದಾಗೆ ಕಾಣಿಸಿ ಕೊಂಡು ಜನರಲ್ಲಿ ಭಯ ಹುಟ್ಟಿಸಿದ್ದು, ಈ ಸಂಬಂಧ ಆರ್‌ಎಫ್‌ಓ ಪೂಜಾ ಅವರಿಗೆ ತಿಳಿಸಿದ್ದರೂ ರೈತರ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಶಾಂತಿಪುರ, ಬೋಚಿಕಟ್ಟೆ, ಕೆ.ಜಿ. ಹುಂಡಿ, ಟೈಗರ್ ಬ್ಲಾಕ್, ಸೇರಿದಂತೆ ಹಲವಾರು ಗ್ರಾಮಗಳ ರೈತರು, ಎಚ್ ಡಿ ಕೋಟೆ ಪಟ್ಟಣದಲ್ಲಿರುವ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Ad

ಪ್ರತಿಭಟನೆ ವೇಳೆ ಮಾತನಾಡಿದ ರೈತ ಲೋಕೇಶ್, ಗುರುವಾರ ಬೆಳಿಗ್ಗೆ ಶಾಂತಿಪುರ ಗ್ರಾಮದ ಯುವಕ ರಘು ಎಂಬುವರು ಅವರ ಜಮೀನಿನಲ್ಲಿ ಬಾಳೆ ಬೆಳೆಗೆ ನೀರುಣಿಸಲು ಪೈಪ್‌ಗಳನ್ನು ಜೋಡಿಸುತ್ತಿದ್ದ ವೇಳೆ ಏಕಾಏಕಿ ಹುಲಿ ಯುವಕನ ಮೇಲೆ ಹಾರಿದೆ. ಗಾಬರಿಗೊಂಡ ಯುವಕನ ಚೀರಾಟ ಕೇಳಿದ ಮೇಲೆ ಹುಲಿ ತಕ್ಷಣ ಅಲ್ಲಿಂದ ಓಡಿಹೋಗಿದೆ.

Ad

ರಘು ಅವರ ಅದೃಷ್ಟ ಯಾವುದೇ ಅನಾಹುತ ಆಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು. ಕಳೆದ 15ದಿನಗಳ ಹಿಂದೆ ಹುಲಿ ಹೆಬ್ಬಳ್ಳ, ಸ್ಟೇಡಿಯಂ ಬಡಾವಣೆಯ ಬಳಿ ಇರುವ ನಾಗಮ್ಮ ಬಸವರಾಜುರವರ ಜಮೀನಿನಲ್ಲಿ, ಕಾಣಿಸಿಕೊಂಡು ಜಮೀನು ನೋಡಿಕೊಳ್ಳುವ ಚಂದ್ರುರವರ ಮೇಲೆ ಹುಲಿ ದಾಳಿ ಮಾಡಲು ಮುಂದಾಗಿತ್ತು ತಂತಿಬೆsಲಿ ಇದ್ದ ಹಿನ್ನಲೆ ದಾಳಿಯಿಂದ ಪಾರಾಗಿದ್ದರು.

Ad

ಹಿನ್ನೆಲೆಯಲ್ಲಿ ಮಹೇಂದ್ರ ಮತ್ತು ಭೀಮ ಆನೆಗಳು ಭಾಗಿಯಾಗಿ, ರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು ಆದರೆ ಹುಲಿ ಇಲಾಖೆಯವರಿಗೆ ಚಳ್ಳೆಹಣ್ಣು ತಿನಿಸಿ, ತಪ್ಪಿಸಿಕೊಂಡಿತು. ನಂತರ ಅರಣ್ಯ ಇಲಾಖೆಯವರು ಕಾರ್ಯಚರಣೆಯನ್ನು ಸ್ಥಗಿತಗೊಳಿಸಿದರು. ಮತ್ತೆ ಹುಲಿ ಕಳೆದ ಎರಡು ದಿನಗಳಿಂದ ಶಾಂತಿಪುರ ಗ್ರಾಮ ಹಾಗೂ ಅಕ್ಕಪಕ್ಕ ಗ್ರಾಮಗಳಲ್ಲಿ ಕಾಣಿಸಿಕೊಂಡು ರೈತg ಮೇಲೆ ದಾಳಿಗೆ ಮುಂದಾಗಿದೆ. ಹುಲಿಯನ್ನು ಸೆರೆ ಹಿಡಿಯುವಂತೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

Ad

ಪ್ರತಿಭಟನೆಯಲ್ಲಿ, ಪುರಸಭಾ ಸದಸ್ಯರಾದ ರಾಜು, ಲೋಕೇಶ್, ರೈತ ಸಂಘದ ಉಪಾಧ್ಯಕ್ಷ ಮಾದೇವಯ್ಯ, ಚಾಕಳ್ಳಿಕೃಷ್ಣ, ಸಂತೋಷ್, ಸಾಧಿಕ್, ಸಿಕಂದರ್, ಶಫಿ, ಕಲಂದರ್, ಅಬ್ದುಲ್ ರೆಹಮಾನ್, ದೊರೆರಾಜ್, ಚೆನ್ನ ನಾಯಕ, ಶಿವರಾಜು, ಬೈರನಾಯಕ, ಮಂಜು ನಾಯಕ, ಸಣ್ಣ ಸ್ವಾಮಿ, ಸುರೇಶ್, ರಾಜು, ಶಿವು, ಪ್ರವೀಣ, ಅಜರುದ್ದೀನ್, ಶಿವಮೂರ್ತಿ ಸೀಗ ನಾಯಕ, ಅಭಿನಾಶ್, ಆನಂದ, ಪ್ರತಾಪ್ ಮುಂತಾದವರಿದ್ದರು.

Ad
Ad
Ad
Nk Channel Final 21 09 2023