ನಂಜನಗೂಡು: ಮೈಕ್ರೋ ಫೈನಾನ್ಸ್ ಕಚೇರಿಗಳಿಗೆ ಬೀಗ ಜಡಿಯುವ ಚಳುವಳಿಗೆ ರೈತರು ಕರೆ ನೀಡಿದ್ದಾರೆ. ನಂಜನಗೂಡಿನಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಇಬ್ಬರು ಬಲಿಯಾದ ಪ್ರಕರಣ ನಡೆದಿದೆ. ಅಂಬಾನಿ ಅದಾನಿ ರವರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ.ಈ ದೇಶದ ಮೂಲ ನಿವಾಸಿಗಳು ತಮ್ಮ ಜೀವನ ಸಾಗಿಸಲು ಎರಡು ಮೂರು ಲಕ್ಷವನ್ನು ಪಡೆದಿರುವ ಕುಟುಂಬಗಳು ಎಂದು ಆತ್ಮಹತ್ಯೆಗೆ ಶರಣಾಗಿವೆ.
ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಮೈಕ್ರೋ ಫೈನಾನ್ಸ್ ರವರು ಕಿರುಕುಳ ನೀಡಿದ್ದಾರೆ. ಈ ಕೂಡಲೇ ನೊಂದ ಕುಟುಂಬಸ್ಥರಿಗೆ ಸರ್ಕಾರ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು. ನಂಜನಗೂಡಿನಲ್ಲಿ ಮೈಕ್ರೋಫೈನಾನ್ಸ್ ಕಚೇರಿಗಳಿಗೆ ಬೀಗ ಜಡಿಯುವ ಚಳುವಳಿಗೆ ಕರೆ ನೀಡಲಾಗುತ್ತದೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ವಿರುದ್ಧ ಈಗಾಗಲೇ ಕೂಡಲೇ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ನಂಜನಗೂಡಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಏಕೀಕರಣ ಸಮಿತಿಯ ರಾಜ್ಯ ಮುಖಂಡ ಪಚ್ಚೆ ನಂಜುಂಡಸ್ವಾಮಿ, ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಹೇಳಿಕೆ ನೀಡಿದ್ದಾರೆ.