Bengaluru 23°C
Ad

ಸಾಲ ಮರುಪಾವತಿಗೆ ಹೆದರಿ ರೈತ ಆತ್ಮಹತ್ಯೆ

ಕೃಷಿಗಾಗಿ ಸಾಲ ಮಾಡಿ ನಷ್ಟ ಹೊಂದಿದ್ದ ರೈತರು ಸಾಲ ಮರುಪಾವತಿ ಮಾಡುವಂತೆ ಬಂದಿದ್ದ ನೋಟೀಸ್ ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲೂಕು ಕಸಬಾ ಹೋಬಳಿ ಕನುಗನಹಳ್ಳಿಯಲ್ಲಿ ನಡೆದಿದೆ.

ಮೈಸೂರು: ಕೃಷಿಗಾಗಿ ಸಾಲ ಮಾಡಿ ನಷ್ಟ ಹೊಂದಿದ್ದ ರೈತರು ಸಾಲ ಮರುಪಾವತಿ ಮಾಡುವಂತೆ ಬಂದಿದ್ದ ನೋಟೀಸ್ ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲೂಕು ಕಸಬಾ ಹೋಬಳಿ ಕನುಗನಹಳ್ಳಿಯಲ್ಲಿ ನಡೆದಿದೆ.

Ad

ಕನುಗನಹಳ್ಳಿ ಗ್ರಾಮದ ನಿವಾಸಿ ಪ್ರಭಾಕರ್ ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಜಮೀನು ಹೊಂದಿದ್ದು, ಬೆಳೆ ಭೆಳೆಯಲು ವಿವಿಧೆಡೆ ಸಾಲ ಮಾಡಿದ್ದರು. ಆದರೆ ಕೃಷಿ ಕೈಕೊಟ್ಟಿದ್ದರಿಂದ ಸಾಲದ ಅಸಲು ಕಟ್ಟುವುದಿರಲಿ ಬಡ್ಡಿ ಕಟ್ಟಲು ಕಷ್ಟಪಡುವಂತಾಗಿತ್ತು. ಈ ನಡುವೆ ತಿಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1 ಲಕ್ಷ ಕೃಷಿ ಸಾಲವನ್ನು ಪಡೆದಿದ್ದರು.

Ad

ಈ ಸಾಲದ ಹಣವನ್ನು ಪಾವತಿಸಿರಲಿಲ್ಲ. ಹೀಗಾಗಿ ನ.29 ರಂದು ಸಾಲ ಮರುಪಾವತಿ ಮಾಡಬೇಕು ಎಂದು ತಿಳುವಳಿಕೆ ನೋಟಿಸ್ ಜಾರಿ ಮಾಡಲಾಗಿತ್ತು. ಸದ್ಯ ಭತ್ತದ ಬೆಳೆಯಿಂದ ಆದಾಯ ಪಡೆಯಬಹುದೆಂದು ನಂಬಿದ್ದರಾದರೂ ಈ ಬಾರಿ ಭತ್ತಕ್ಕೆ ರೋಗ ಬಂದಿದ್ದರಿಂದ ಸಂಕಷ್ಟ ಅನುಭವಿಸುವಂತಾಗಿತ್ತು. ಇದೆಲ್ಲ ಸಮಸ್ಯೆಗಳಿಂದ ನೊಂದಿದ್ದ ರೈತ ಪ್ರಭಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮೃತರ ಪುತ್ರ ವಿಜಯ್ ಕುಮಾರ್ ನೀಡಿದ ದೂರಿನ ಮೇರೆಗೆ ಕೆ.ಆರ್.ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad

ಇತ್ತೀಚೆಗಿನ ದಿನಗಳಲ್ಲಿ ಮತ್ತೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಕೇಳಿ ಬರುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಸಂಬಂಧ ಸರ್ಕಾರ ಗಮನಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ. ರೈತರು ಕೂಡ ಸಮಸ್ಯೆಗಳಿಗೆ ಆತ್ಮಹತ್ಯೆವೊಂದೇ ಪರಿಹಾರವಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ.

Ad
Ad
Ad
Nk Channel Final 21 09 2023