ಮೈಸೂರು: ಶಾಸಕ ದರ್ಶನ್ ಧ್ರುವನಾರಾಯಣ್ ಗೆ ಸಚಿವ ಸ್ಥಾನ ನೀಡುವಂತೆ ದಲಿತ ಮುಖಂಡರ ಆಗ್ರಹಿಸಿದ್ದು, ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಚಿವ ಸ್ಥಾನಕ್ಕೆ ದಲಿತ ಮುಖಂಡರು ಆಗ್ರಹಿಸಿದ್ದಾರೆ.
ದರ್ಶನ್ ಧ್ರುವನಾರಾಯಣ್ ಅವರು ಮೊದಲ ಬಾರಿಗೆ ಶಾಸಕರಾದರೂ ರಾಜಕೀಯ ಪ್ರಬುದ್ಧತೆ ಇದೆ. ಅವರ ತಂದೆ ಧ್ರುವನಾರಾಯಣ್ ರವರೂ ಸಹ ಶಾಸಕ, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ದಲಿತ ಕೋಟಾ ಇಲ್ಲವೇ ಯುವಕರ ಪ್ರಾತಿನಿಧ್ಯತೆ ಮೇಲೆ ದರ್ಶನ್ ಅವರಿಗೆ ಸಚಿವ ಸ್ಥಾನ ನೀಡಬೇಕು.
ದರ್ಶನ್ ಅವರಿಗೆ ಸಚಿವ ಸ್ಥಾನ ನೀಡೀದ್ದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಾಯವಾಗಲಿದೆ. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ ದಲಿತ ಮುಖಂಡರು. ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ವಿ ಸಿ ಶ್ರೀನಿವಾಸಮೂರ್ತಿ, ವಿ ಆರ್ ವಿಜಯಕುಮಾರ್, ಪುಟ್ಟಬುದ್ದಿ ಸೇರಿದಂತೆ ದಲಿತ ಮುಖಂಡರು ಭಾಗಿ.