ಗುಂಡ್ಲುಪೇಟೆ ; ರಸ್ತೆ ದಾಟುವ ವೇಳೆ ಕಾರು ಡಿಕ್ಕಿಯಾಗಿ ಜಿಂಕೆ ಹಾಗೂ ಸೀಳುನಾಯಿ ಮೃತಪಟ್ಟ ಘಟನೆ ಕೇರಳ- ಕರ್ನಾಟಕ ಹೆದ್ದಾರಿ ಹಾದು ಹೋಗಿರುವ ಬಂಡೀಪುರದ ಮದ್ದೂರು ವಲಯದಲ್ಲಿ ನಡೆದಿದೆ.
Ad
ಕೇರಳ ರಾಜ್ಯದ ಸುಲ್ತಾನ್ ಬತ್ತೇರಿ ನಿವಾಸಿ ಸ್ಟೆಫನ್ ಸನ್ನಿ ಎಂಬಾತನನ್ನು ಬಂಧಿಸಿಲಾಗಿದೆ. ವೇಗವಾಗಿ ತೆರಳುತ್ತಿದ್ದ ಈತನ ಕಾರು ಡಿಕ್ಕಿ ಹೊಡೆದ ಪರಿಣಾಮ ಅಂದಾಜು 05 ವರ್ಷದ ಗಂಡು ಸೀಳುನಾಯಿ ಹಾಗೂ 03 ವರ್ಷದ ಒಂದು ಗಂಡು ಜಿಂಕೆ ಸಾವನ್ನಪ್ಪಿವೆ.
Ad
ಅಪಘಾತವಾಗುತ್ತಿದ್ದಂತೆ ಸನ್ನಿ ಪರಾರಿಯಾಗುತ್ತಿದ್ದನು. ಈತನನ್ನು ಬೆನ್ನಟ್ಟಿ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದು ಕಾರನ್ನು ವಶಪಡಿಸಿಕೊಂಡಿದ್ದಾರೆ.
Ad
Ad