Ad

ಹಂಬಳೆ ಗ್ರಾಮದಲ್ಲಿ ಚಿರತೆಯ ಮೃತ ದೇಹ ಪತ್ತೆ: ಅರಣ್ಯಾಧಿಕಾರಿ ಭೇಟಿ

ತಾಲ್ಲೂಕಿನ ಹಂಬಳೆ ಗ್ರಾಮದ ಜಮೀನೊಂದರಲ್ಲಿ ಹೆಣ್ಣು ಚಿರತೆಯೊಂದು ಅಸಹಜವಾಗಿ ಮೃತಪಟ್ಟಿದೆ.

ನಂಜನಗೂಡು: ತಾಲ್ಲೂಕಿನ ಹಂಬಳೆ ಗ್ರಾಮದ ಜಮೀನೊಂದರಲ್ಲಿ ಹೆಣ್ಣು ಚಿರತೆಯೊಂದು ಅಸಹಜವಾಗಿ ಮೃತಪಟ್ಟಿದೆ. ಹಂಬಳೆ ಗ್ರಾಮದ ಸರ್ವೆ 6/6 ನಂಬರ್ ವೀರಭದ್ರಪ್ಪ ಎಂಬುವವರ ಜಮೀನಿನಲ್ಲಿ ಚಿರತೆ ಮೃತ ದೇಹ ಪತ್ತೆಯಾಗಿತ್ತು. ಜಮೀನಿನ ಮಾಲೀಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

Ad
300x250 2

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಂಜನಗೂಡು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್, ಸಹಾಯಕ ಸಂರಕ್ಷಣಾಧಿಕಾರಿ ಅಭಿಷೇಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು ಒಂದರಿಂದ ಐದು ವರ್ಷದ ಹೆಣ್ಣು ಚಿರತೆಯಾಗಿದ್ದು, ಅಸಹಜವಾಗಿ ಚಿರತೆ ಸಾವನ್ನಪ್ಪಿದೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಚಿರತೆಯನ್ನು ರವಾನಿಸಿದ್ದಾರೆ. ವನ್ಯಜೀವಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಸಹಾಯಕ ಸಂರಕ್ಷಣಾಧಿಕಾರಿ ಅಭಿಷೇಕ್, ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

Ad
Ad
Nk Channel Final 21 09 2023
Ad