Bengaluru 23°C
Ad

ರಾಜ್ಯಪಾಲರ ವಿರುದ್ಧ ದಲಿತ ಜಾಗೃತಿ ಸಮಿತಿ ರಾಷ್ಟ್ರಪತಿಗೆ ದೂರು

ರಾಜ್ಯಪಾಲರ ವಿರುದ್ಧ ದಲಿತ ಜಾಗೃತಿ ಸಮಿತಿ ರಾಷ್ಟ್ರಪತಿಗೆ ದೂರು ನೀಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಕಾನೂನುಬಾಹಿರವಾಗಿ ನಿವೇಶನ ಪಡೆದಿದ್ದಾರೆ.

ಮೈಸೂರು: ರಾಜ್ಯಪಾಲರ ವಿರುದ್ಧ ದಲಿತ ಜಾಗೃತಿ ಸಮಿತಿ ರಾಷ್ಟ್ರಪತಿಗೆ ದೂರು ನೀಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಕಾನೂನುಬಾಹಿರವಾಗಿ ನಿವೇಶನ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ನೀಡಿದ್ದಾರೆ.

ಈ ಬೆನ್ನಲ್ಲೇ ರಾಜ್ಯಪಾಲರ ನಡೆ ಖಂಡಿಸಿ ದಲಿತ ಜಾಗೃತಿ ಸಮಿತಿ ತಿ. ನರಸೀಪುರ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ. ಈ ವೇಳೆ ಕೇಂದ್ರ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲದೇ ತಹಶೀಲ್ದಾರ್‌ ಮೂಲಕ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ದೂರು ನೀಡಿದೆ.

Ad
Ad
Nk Channel Final 21 09 2023