News Karnataka Kannada
Thursday, May 02 2024
ಮೈಸೂರು

ಬನ್ನಿಮಂಟಪದಲ್ಲಿ ದಸರಾಗೆ ವರ್ಣರಂಜಿತ ತೆರೆ

Colourful opening for Dasara at Bannimantap
Photo Credit : News Kannada

ಮೈಸೂರು: ಮೈನವಿರೇಳಿಸುವ ಬೈಕ್ ಸಾಹಸ, ನಿಬ್ಬೆರಗಾಗಿಸುವ ಅಶ್ವರೋಹಿ ದಳದ ಪಥಸಂಚಲನ, ನೂರಾರು ಕಲಾವಿದರ ಚಿತ್ತಾಕರ್ಷಕ ನೃತ್ಯ ವೈಭವದ ಸಂಗಮ ಮೈಸೂರು ದಸರಾಗೆ ವರ್ಣರಂಜಿತ ತೆರೆ ಬಿದ್ದಿದೆ.

ಆಕಾಶದಲ್ಲಿ ಮೂಡಿದ ‘ಹ್ಯಾಪಿ ದಸರಾ’ ಸಾಲು, ಕರ್ನಾಟಕ ಮ್ಯಾಪ್, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಕೃತಿ, ಗಂಡುಬೇರುಂಡ ಚಿತ್ರ, ಮೈಸೂರು ಅರಮನೆ, ಚಾಮುಂಡಿಬೆಟ್ಟದ ನಂದಿ, ದಸರಾ ಅಂಬಾರಿ.. ಚುಕ್ಕಿ ಬೆಳಕಿನ ಚಿತ್ರಗಳು ನೋಡುಗರಿಗೆ ಮನಸ್ಸಿಗೆ ಮುದ ನೀಡಿದವು. ಕೊನೆಯಲ್ಲಿ ‘ಸಿ ಯು ಇನ್ 2024’ ಮತ್ತೆ ಬೇಗ ದಸರಾ ಬರಲಿ ಎಂಬ ಭಾವನೆ ಜನರಲ್ಲಿ ಮೂಡುವಂತೆ ಮಾಡಿತು.

ಬನ್ನಿಮಂಟಪದಲ್ಲಿ ನಡೆದ ಪಂಚಿನ ಕವಾಯತು ಮೂಲಕ ಈ ಬಾರಿ ದಸರಾಗೆ ತೆರೆ ಎಳೆಯಲಾಯಿತು. ಜಂಬೂಸವಾರಿಗೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದ್ದ ಸಿಎಂ, ರಾತ್ರಿ ನಡೆದ ಪಂಜಿನ ಕವಾಯತಿನಲ್ಲೂ ಭಾಗಿಯಾಗಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್ ಅವರಿಗೆ ಪೊಲೀಸ್ ಇಲಾಖೆ ಗೌರವ ವಂದನೆ ಸಲ್ಲಿಸಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು