Bengaluru 18°C

ಹಾಸನದಲ್ಲಿ ಸಿಎಂ ಸ್ವಾಭಿಮಾನಿ ಸಮಾವೇಶ ಎಫೆಕ್ಟ್: ಮೈಸೂರಿನಲ್ಲಿ ಬಸ್‌ಗಳ ಕೊರತೆ

ಹಾಸನದಲ್ಲಿ ಸಿಎಂ ಸ್ವಾಭಿಮಾನಿ ಸಮಾವೇಶ ಎಫೆಕ್ಟ್ ನಿಂದ ಮೈಸೂರಿನಲ್ಲಿ ಬಸ್‌ಗಳ ಕೊರತೆ ಉಂಟಾಗಿದೆ.

ಮೈಸೂರು : ಹಾಸನದಲ್ಲಿ ಸಿಎಂ ಸ್ವಾಭಿಮಾನಿ ಸಮಾವೇಶ ಎಫೆಕ್ಟ್ ನಿಂದ ಮೈಸೂರಿನಲ್ಲಿ ಬಸ್‌ಗಳ ಕೊರತೆ ಉಂಟಾಗಿದೆ. ಸರಿಯಾದ ಸಮಯಕ್ಕೆ ಬಸ್ ಗಳಿಲ್ಲದೆ ವಿದ್ಯಾರ್ಥಿಗಳು ಸಿಡಿದೆದ್ದಿದ್ದು, ಬಸ್‌ಗಳನ್ನ ತಡೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹುಣಸೂರು ತಾಲ್ಲೂಕಿನ ಬಿಳಿಕೆರೆಯಲ್ಲಿ ನಡೆದಿದೆ.


ಹಾಸನದಲ್ಲಿ ಇಂದು ಜನಕಲ್ಯಾಣ ಶ್ರೀ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ನಡೆಯಲಿದ್ದು, ಸಮಾವೇಶಕ್ಕೆ ನೂರಾರು ಸರ್ಕಾರಿ ಬಸ್ ಗಳನ್ನ ಬಳಸಿಕೊಂಡಿರುವ ಹಿನ್ನಲೆ.
ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾ ರ್ಥಿಗಳಿಗೆ ಬಸ್ಸುಗಳ ಕೊರತೆ ಉಂಟಾಗಿದೆ.


ಬಸ್ಗಳ ಕೊರತೆಯಿಂದಾಗಿ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಹಾಸನದತ್ತ ಕಾರ್ಯಕರ್ತರನ್ನ ಕರೆದೊಯ್ಯುತ್ತಿರುವ ಬಸ್ ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಚಾಲಕರ ಜೊತೆಗೆ ಮಾತಿನ ಚಕಮಕಿ ನಡೆದಿದೆ. ಬಸ್ ಗಳಿಗೆ ಅಳವಡಿಸಲಾದ ಸಮಾವೇಶದ ಬ್ಯಾನರ್ ಗಳನ್ನ ಸ್ಟೂಡೆಂಟ್ಸ್ ಕಿತ್ತುಹಾಕಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಕೆಲಕಾಲ ಸುಗಮ ಸಂಚಾರ ವ್ಯತ್ಯಯ ಉಂಟಾಗಿದೆ.


ಸ್ಥಳಕ್ಕಾಗಮಿಸಿ ವಿದ್ಯಾ ರ್ಥಿಗಳ ಮನ ಒಲಿಸುವ ಪ್ರಯತ್ನವನ್ನು ಪೊಲೀಸರು ಮಾಡಿ, ಬಸ್ ಹಾಗೂ ವಾಹನಗಳ ಸಂಚಾರಕ್ಕೆ ಅನುವು ಮಾಡಿದ್ದಾರೆ. ವಿದ್ಯಾ ರ್ಥಿಗಳ ಆಕ್ರೋಶ ಕ್ಕೆ ಪೋಷಕರು ಹಾಗೂ ಸ್ಥಳೀಯರು ಸಾಥ್ ನೀಡಿದ್ದಾರೆ.


Nk Channel Final 21 09 2023