ಮೈಸೂರು: ಒಂದೆಡೆ ಹೊಟ್ಟೆಗೆ ಅನ್ನವಿಲ್ಲದೆ ತುತ್ತು ಕೂಳಿಗೂ ಪರದಾಡುವ ಜನರ ನಡುವೆ ಆಹಾರವನ್ನು ತೊಟ್ಟಿಗೆ ಎಸೆಯುವವರೂ ಇದ್ದಾರೆ. ಇಂತಹ ಸಂದರ್ಭದಲ್ಲಿ ವ್ಯರ್ಥವಾಗಿ ಆಹಾರವನ್ನು ಕಸದ ತೊಟ್ಟಿಗೆ ಸುರಿದು ಹಾಳು ಮಾಡುವ ಮುನ್ನ ಅದರ ಮಹತ್ವ ತಿಳಿಸುವ ಪ್ರಯತ್ನವನ್ನು ಜನರಿಗೆ ತಿಳಿಸುವ ಕ್ಲೀನ್ ಪ್ಲೇಟ್ ಅಭಿಯಾನವನ್ನು ಶ್ರೀ ಐಜಿ ಸೇವಾ ಸಮಿತಿ ಹಮ್ಮಿಕೊಂಡಿದೆ.
ಈ ಸಂಬಂಧ ಮೈಸೂರಿನ ವಿಜಯನಗರದಲ್ಲಿರುವ ಕೇರಳ ಸಮಾಜದ ಕಲ್ಯಾಣ ಮಂಟಪದಲ್ಲಿ ಶ್ರೀ ಐಜಿ ಸೇವಾ ಸಮಿತಿ ವತಿಯಿಂದ ಕ್ಲೀನ್ ಪ್ಲೇಟ್ ಅಭಿಯಾನಕ್ಕೆ ಸೇವಾ ಸಮಿತಿಯ ಸದಸ್ಯರು ಚಾಲನೆ ನೀಡಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕಾರ್ಯಕ್ರಮದಲ್ಲಿ ಅಭಿಯಾನದ ಉದ್ದೇಶದ ಬಗ್ಗೆ ಮಾತನಾಡಿದ ಸಮಿತಿಯ ಸಂಚಾಲಕ ಕುಮಾರಂ ಅನ್ನದಾನ ಮಹಾದಾನ.
ಆಹಾರ ಚೆಲ್ಲುವ ಮುನ್ನ ಯೋಚಿಸಿ. ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ. ಈ ಉದ್ದೇಶದಿಂದ ನಮ್ಮ ಸಮಾಜದ ನಡೆಯುವ ಶುಭ ಸಮಾರಂಭಕ್ಕೆ ಭೇಟಿ ನೀಡಿ ಊಟ ಮಾಡಿ ಕೈ ತೊಳೆಯುವ ಸ್ಥಳದಲ್ಲಿ ಪ್ಲೇಟ್ ನಲ್ಲಿ ಆಹಾರಗಳನ್ನು ಬಿಸಾಡಿದರೆ ಅವರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನವನ್ನು ಪ್ರಾರಂಭಿಸಿರುವುದಾಗಿ ಹೇಳಿದರು.
ಅಲ್ಲದೆ ಕಾರ್ಯಕ್ರಮಗಳಲ್ಲಿ ಮದುವೆ ಸಮಾರಂಭಗಳಲ್ಲಿ ಎಲ್ಲರೂ ತಮ್ಮ ತಟ್ಟೆಗೆ ಹಾಕಿಸಿಕೊಂಡ ಆಹಾರವನ್ನು ಎಸೆಯದೆ, ತಮಗೆಷ್ಟು ಬೇಕೋ ಅಷ್ಟನ್ನೇ ಹಾಕಿಸಿಕೊಂಡು ತಟ್ಟೆಯಲ್ಲಿ ಆಹಾರ ಪದಾರ್ಥ ಉಳಿಯದಂತೆ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ತಟ್ಟೆಯಲ್ಲಿ ಇರುವ ಎಲ್ಲಾ ಆಹಾರಗಳನ್ನು ಸೇವಿಸುವಂತೆ ಉತ್ತೇಜಿಸಲಾಗುವುದು ಹಾಗೂ ಆಹಾರದ ಬಗ್ಗೆ ಜಾಗೃತಿಯನ್ನು ಸಹ ಮೂಡಿಸಲಾಗುವುದು ಎಂದು ಹೇಳಿದರಲ್ಲದೆ,
ಈಗ ಸದ್ಯಕ್ಕೆ ನಮ್ಮ ಸಮಾಜದ ಬಂಧುಗಳ ಸಮಾರಂಭ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸತಿದ್ದೇವೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಲ್ಯಾಣ ಮಂಟಪದಲ್ಲೂ ತೆರಳಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಂಡದ ಸದಸ್ಯರಾದ ಚೆನ್ನರಾಮ್, ಧರ್ಮಿಚಂದ್, ಮಂಗಳಾರಮ್, ಅಮರ್, ಗೌತಮ್, ದಿನೇಶ್, ಹಾಗೂ ಇನ್ನಿತರರು ಇದ್ದರು.