News Karnataka Kannada
Monday, April 15 2024
Cricket
ಚಾಮರಾಜನಗರ

ಕರಿಮಣಿ ಮಾಲಿಕ ನೀನಲ್ಲ ಎಂದ ಪತ್ನಿ: ಪತಿ ಆತ್ಮಹತ್ಯೆ

ಪತ್ನಿ ಮಾಡಿದ ಕರಿಮಣಿ ಮಾಲೀಕ ನೀನಲ್ಲ ರೀಲ್ಸ್ ಗೆ ನೊಂದ ಪತಿಯೊಬ್ಬ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.
Photo Credit : By Author

ಚಾಮರಾಜನಗರ: ಪತ್ನಿ ಮಾಡಿದ ಕರಿಮಣಿ ಮಾಲೀಕ ನೀನಲ್ಲ ರೀಲ್ಸ್ ಗೆ ನೊಂದ ಪತಿಯೊಬ್ಬ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದ್ದು ಗುರುವಾರ ಬೆಳ್ಳಿಗ್ಗೆ 11ಗಂಟೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಪಿ.ಜಿ.ಪಾಳ್ಯ ಗ್ರಾಮದ ಕುಮಾರ್ (33) ಮೃತ ದುರ್ದೈವಿ. ಈತ ರೂಪಾ ಎಂಬಾಕೆಯನ್ನು ಮದುವೆಯಾಗಿದ್ದನು. ರೂಪಾ ತನ್ನ ಸೋದರ ಮಾವ ಗೋವಿಂದನೊಂದಿಗೆ ಸೇರಿ ಕರಿಮಣಿ ಮಾಲಿಕ ನೀನಲ್ಲ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಳು. ಇದು ವೈರಲ್ ಆಗುತ್ತಿದ್ದಂತೆಯೇ ಪತಿ ಕುಮಾರನ ಸ್ನೇಹಿತರು, ಜನರು ಕೂಡ ಕೆಟ್ಟದಾಗಿ ಮಾತನಾಡಲಾರಂಭಿಸಿದ್ದರು. ಇದರಿಂದ ನೊಂದ ಕುಮಾರ್ ಪತ್ನಿ ರೂಪಳೊಂದಿಗೆ ಜಗಳ ತೆಗೆದಿದ್ದನು. ಈ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಟಾಪಟಿ ನಡೆದಿತ್ತು. ಆ ನಂತರ ನೊಂದ ಕುಮಾರ್ ಬುಧವಾರ ಜಮೀನಿಗೆ ಹೋದವನು ಅಲ್ಲಿದ್ದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.

ಮನೆಯಿಂದ ಹೊರಗೆ ಹೋದವನು ಮರಳಿ ಮನೆಗೆ ಬಾರದೆ ಇದ್ದಾಗ ಕುಟುಂಬದವರು ಹುಡುಕಾಟ ನಡೆಸಿದಾಗ ಗುರುವಾರ ಬೆಳಿಗ್ಗೆ ಜಮೀನಿನ ಮರವೊಂದಕ್ಕೆ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹನೂರು ಪೊಲೀಸರು ಆಗಮಿಸಿ ಮಹಜರು ನಡೆಸಿ ಶವವನ್ನು ಹನೂರು ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಮೃತ ಕುಮಾರ್ ನ ಸೋದರ ಮಹದೇವಸ್ವಾಮಿ ನೀಡಿದ ದೂರಿನ ಮೇರೆಗೆ ರೀಲ್ಸ್ ಮಾಡಿದ ರೂಪಾ ಮತ್ತು ಆಕೆಯ ಸೋದರ ಮಾವ ಗೋವಿಂದ ವಿರುದ್ಧ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು