ಸಿದ್ದು ಕ್ಷೇತ್ರದಲ್ಲಿ ಮೂಲಸೌಕರ್ಯ ಫ್ಯಾಕ್ಟ್‌ ಚೆಕ್‌ ಗೆ ಸೋಮಣ್ಣ ಸವಾಲ್‌

ಚಾಮರಾಜನಗರ: ‘ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಒಮ್ಮೆ ಸಂಚರಿಸಿ ರಸ್ತೆಗಳು, ಮೂಲ ಸೌಕರ್ಯಗಳ ದಯನೀಯ ಸ್ಥಿತಿ ನೋಡಬೇಕು’ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು. . ಚಾಮರಾಜನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯನವರು ಒಮ್ಮೆ ಕ್ಷೇತ್ರದಲ್ಲಿ ತಿರುಗಾಡಲಿ, ಏನೆಲ್ಲಾ ಅವ್ಯವಸ್ಥೆಗಳಿವೆ.. ಜನ ಹೇಗೆ ಕಷ್ಟದಲ್ಲಿ ಬದುಕುತ್ತಿದ್ದಾರೆ ನೋಡಬೇಕು. ನಾನು ಅವರ ಜೊತೆ ಹೋಗುತ್ತೇನೆ, ಹೋಗಿ ಸುತ್ತಾಡೋಣ.” ಅವರು ಮಾಡಿದ ಕೆಲಸದಿಂದ ಜನರು ತೃಪ್ತರಾಗಿದ್ದರೆ, ನಾನು ಅವರಿಗೆ ನಮಸ್ಕರಿಸುತ್ತೇನೆ ಎಂದು ಸೋಮಣ್ಣ ಹೇಳಿದರು. ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ದೇವರಾಜ ಅರಸು ಅವರಿಗಿಂತ ಸಿದ್ದರಾಮಯ್ಯ ದೊಡ್ಡವರಲ್ಲ. ಜನರು ಎಲ್ಲವನ್ನೂ ನಿರ್ಧರಿಸುತ್ತಾರೆ. ಸಿದ್ದರಾಮಯ್ಯ ಅವರು ಬೇರೆಯವರನ್ನು ನಿಂದಿಸುವ ಬದಲು ವಾಸ್ತವದತ್ತ ಗಮನ ಹರಿಸಿದರೆ ಒಳ್ಳೆಯದು ಎಂದು ಹೇಳಿದರು.

ವರುಣಾದಲ್ಲಿ ಪ್ರಚಾರಕ್ಕೆ ಅಡ್ಡಿಯಾದ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ದಿನಕ್ಕಲ್ಲ, ದಿನಕ್ಕೊಂದು ಪ್ರಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ಹತಾಶರಾಗಿದ್ದಾರೆ, ಈ ರಾಜ್ಯದ ಮಾಜಿ ಸಿಎಂಗೆ ಮುಜುಗರವಾಗದಂತೆ ಸಹಿಸಿಕೊಂಡಿದ್ದೇನೆ ಎಂದರು.

 

Umesha HS

Recent Posts

ಜಮ್ಮು & ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಕ್ಷೇತ್ರದ ಮತದಾನ ಮುಂದೂಡಿಕೆ

ಲೋಕಸಭಾ ಚುನಾವಣೆ ಯ ಎರಡು ಹಂತದ ಮತದಾನ ಈಗಾಗಲೇ ಮುಗಿದಿದೆ. ಮೇ 7ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಈ…

7 hours ago

ಮೇ 01 ರಂದು ಕರ್ನಾಟಕಕ್ಕೆ ಅಮಿತ್​ ಶಾ ಎಂಟ್ರಿ

ಲೋಕಸಭಾ ಚುನಾವಣಾ ಹಿನ್ನಲೆ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದ್ದು ಇದೀಗ 2ನೇ ಹಂತದ ಚುನಾವಣೆ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ.ಪ್ರಧಾನಿ…

7 hours ago

ಆಂಪಿಯರ್ ಎಲೆಕ್ಟ್ರಿಕ್ ಕಂಪೆನಿ ಬಿಡುಗಡೆ ಮಾಡುತ್ತಿದೆ ನೆಕ್ಸಸ್ ಇವಿ ಸ್ಕೂಟರ್

ಗ್ರೀವ್ ಕಾಟನ್ ಮಾಲೀಕತ್ವದ ಆಂಪಿಯರ್ ಎಲೆಕ್ಟ್ರಿಕ್ ಕಂಪನಿ ತನ್ನ ಹೊಚ್ಚ ಹೊಸ ನೆಕ್ಸಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ…

8 hours ago

ಜೆಡಿಎಸ್ ತೊರೆದ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಠಾಣ, ನಿಜಾಂಪುರ, ಕೊಳಾರ(ಕೆ), ಗೋರನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜೆಡಿಎಸ್ ಮುಖಂಡರು ಪಕ್ಷ…

8 hours ago

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೈವೋಲ್ಟೇಜ್ ಕ್ಷೇತ್ರ ಅಫಜಲಪುರಕ್ಕೆ ಆಗಮನ

ಜಿಲ್ಲೆಯ ಬಿಜೆಪಿ ಲೋಕಸಭಾ ಅಭ್ಯರ್ಥಿ ಉಮೇಶ ಜಾಧವ್ ಅವರ ಪ್ರಚಾರ ನಿಮಿತ್ಯ ಜಿಲ್ಲೆಯ ಹೈವೊಲ್ಟೇಜ್ ಕ್ಷೇತ್ರ ಅಫಜಲಪುರ ಪಟ್ಟಣದಲ್ಲಿ ಬಿಜೆಪಿ…

8 hours ago

ಲೋಕಸಭಾ ಚುನಾವಣೆ : ಕಾಂಗ್ರೆಸ್​ ಹೊಸ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಲೋಕಸಭಾ ಚುನಾವಣೆಗೆ ಹಿನ್ನಲೆ ಸಂಬಂಧಿಸಿದಂತೆ ಇಂದು ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷದ…

9 hours ago