News Karnataka Kannada
Sunday, April 14 2024
Cricket
ಚಾಮರಾಜನಗರ

ಚಾಮರಾಜನಗರ: ಭೂಕಬಳಿಕೆ ವಿರುದ್ಧ ರೊಚ್ಚಿಗೆದ್ದ ಬ್ಯಾಡಮೂಡ್ಲು ಗ್ರಾಮದ ಜನರು

ಭೂಕಬಳಿಕೆ ವಿರುದ್ಧ ರೊಚ್ಚಿಗೆದ್ದ ಜಿಲ್ಲೆಯ ಬ್ಯಾಡಮೂಡ್ಲು ಗ್ರಾಮದ ಜನರು ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಜಾಗದಲ್ಲಿ ನಿವೇಶನ ಮಾಡಿಕೊಳ್ಳಲು ಮುಂದಾಗಿ ಆಡಳಿತ ವರ್ಗಕ್ಕೆ ಟಾಂಗ್ ಕೊಟ್ಟಿರೋ ಘಟನೆ ನಡೆದಿದೆ.
Photo Credit : News Kannada

ಚಾಮರಾಜನಗರ: ಭೂಕಬಳಿಕೆ ವಿರುದ್ಧ ರೊಚ್ಚಿಗೆದ್ದ ಜಿಲ್ಲೆಯ ಬ್ಯಾಡಮೂಡ್ಲು ಗ್ರಾಮದ ಜನರು ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಜಾಗದಲ್ಲಿ ನಿವೇಶನ ಮಾಡಿಕೊಳ್ಳಲು ಮುಂದಾಗಿ ಆಡಳಿತ ವರ್ಗಕ್ಕೆ ಟಾಂಗ್ ಕೊಟ್ಟಿರೋ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಬಸವಾಪುರ ಎಲ್ಲೆಗೆ ಸೇರಿದ ಸರ್ವೇ ನಂಬರ್ 274 ರಲ್ಲಿ ಸರ್ಕಾರಿ ಗೋಮಾಳಕ್ಕೆ ಸೇರಿದ ನೂರಕ್ಕೂ ಹೆಚ್ಚು ಎಕರೆ ಭೂಮಿಯನ್ನ ಭೂಗಳ್ಳರು ಅತಿಕ್ರಮಣ ಮಾಡುವುದಲ್ಲದೆ ಹೊಸದಾಗಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಹಲವು ಬಾರಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ರು ಸಹ ಯಾವುದೇ ಪ್ರಯೋಜನವಾಗದೆ ಅಧಿಕಾರಿಗಳ ನಡೆಗೆ ಬೇಸತ್ತ ಗ್ರಾಮದ ಜನರು ಇಂದು ತಾವೇ ಖುದ್ದು ಸರ್ಕಾರಿ ಜಮೀನಿಗೆ ಲಗ್ಗೆಯಿಟ್ಟು ಶೆಡ್ ಹೊಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನೂರಾರು ಎಕರೆ ಒತ್ತುವರಿ ಭೂಮಿಯನ್ನ ತೆರವುಗೊಳಿಸಿ ಅಂತ ಪರಿಪರಿಯಾಗಿ ಮನವಿ ಮಾಡಿದ್ರು ಅಧಿಕಾರಿಗಳು ಸೊಪ್ಪು ಹಾಕದಿರುವುದಕ್ಕೆ ಇಂದು ಗ್ರಾಮಸ್ಥರು ತಕ್ಕ ಸಾಸ್ತಿ ಮಾಡಿದ್ದಾರೆ.

ಈ ಸ್ಥಳದಲ್ಲಿ ಬಣ್ಣಾರಿ ಅಮ್ಮನ ದೇವಸ್ಥಾನ ಮತ್ತು ಗವಿಸಿದ್ದೇಶ್ವರ ದೇಗುಲವಿದೆ ಆದ್ರೆ ಅಲ್ಲಿಗೆ ಹೋಗಿ ಪೂಜಾ ಕೈಂಕರ್ಯ ನಡೆಸಲು ಅವಕಾಶವಿಲ್ಲದಂತಾಗಿದೆ , ದನಕರುಗಳನ್ನು ಮೇಯಿಸಲು ಸಹ ಒತ್ತುವರಿದಾರರು ಬಿಡುತ್ತಿಲ್ಲ, ಎಂದು ಗ್ರಾಮಸ್ಥರು ಕಂದಾಯ ಇಲಾಖೆಗೆ ದೂರು ನೀಡಿದ್ರು ಯಾವ ಕ್ರಮವನ್ನು ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ್ದಕ್ಕೆ ಉಳಿದ ಭೂಮಿಯನ್ನ ವಶಕ್ಕೆ ಪಡೆದು ನಮಗೂ ಇಲ್ಲಿ ಸ್ಥಳಾವಕಾಶ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು