News Karnataka Kannada
Monday, April 29 2024
ಚಾಮರಾಜನಗರ

ಅಕ್ರಮವಾಗಿ ಹೋಮ್ ಮೇಡ್ ವೈನ್ ಮಾರಾಟ : ಆರೋಪಿ ಬಂಧನ

ಅಕ್ರಮವಾಗಿ ಮಡಿಕೇರಿ ಮೂಲದ ಹೋಮ್ ಮೇಡ್ ವೈನ್ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ 285 ಲೀಟರ್ನಷ್ಟು ಮದ್ಯವನ್ನ ವಶಪಡಿಸಿಕೊಂಡು ಆರೋಪಿಯನ್ನ ಬಂಧಿಸಿರುವ ಘಟನೆ ನಡೆದಿದೆ.
Photo Credit : News Kannada

ಚಾಮರಾಜನಗರ: ಅಕ್ರಮವಾಗಿ ಮಡಿಕೇರಿ ಮೂಲದ ಹೋಮ್ ಮೇಡ್ ವೈನ್ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ 285 ಲೀಟರ್ನಷ್ಟು ಮದ್ಯವನ್ನ ವಶಪಡಿಸಿಕೊಂಡು ಆರೋಪಿಯನ್ನ ಬಂಧಿಸಿರುವ ಘಟನೆ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕೂರ್ಗ್ ಹೋಮ್ ಮೇಡ್ ವೈನ್ಸ್ ಮಳಿಗೆ ಮೇಲೆ ಮೈಸೂರು ಅಬಕಾರಿ ಜಂಟಿ ಆಯುಕ್ತ ಪಕೀರಪ್ಪ ಹೆಚ್ ಚಲವಾದಿ ಮತ್ತು ಚಾಮರಾಜನಗರ ಜಿಲ್ಲೆ ಅಬಕಾರಿ ಉಪ ಆಯುಕ್ತ ನಾಗಶಯನ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ 285 ಲೀಟರ್ ವೈನ್ ವಶಪಡಿಸಿಕೊಂಡು ಆರೋಪಿ ಬೇಗೂರು ಮೂಲದ ದಿನೇಶ್ ನಾಯ್ಡು ಎಂಬಾತನನ್ನ ವಶಕ್ಕೆ ಪಡೆದಿದ್ದಾರೆ. ಚುನಾವಣಾ ನೀತಿ ಸಂಹಿತೆ ಘೋಷಣೆ ಬಳಿಕ ಅಲರ್ಟ್ ಆಗಿರುವ ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟ ಮತ್ತು ಸಾಗಣೆ ಮೇಲೆ ಬಾರಿ ನಿಗಾವಹಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು