News Karnataka Kannada
Friday, April 12 2024
Cricket
ಚಾಮರಾಜನಗರ

55 ಸಾವಿರ ಮೌಲ್ಯದ ಮದ್ಯವನ್ನು ನಾಶ ಪಡಿಸಿದ ಅಬಕಾರಿ, ಪೊಲೀಸ್ ಅಧಿಕಾರಿಗಳು

Excise, police officials destroy liquor worth Rs 55,000
Photo Credit : News Kannada

ಗುಂಡ್ಲುಪೇಟೆ: ಅಬಕಾರಿ ಮತ್ತು ಪೊಲೀಸ್ ಇಲಾಖೆಯು ಕಳೆದ ಐದು ತಿಂಗಳ ಅವಧಿಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 55 ಸಾವಿರ ಮೌಲ್ಯದ ಸುಮಾರು 150 ಲೀಟರ್ ಗು ಹೆಚ್ಚು ಮದ್ಯವನ್ನ ಗುಂಡ್ಲುಪೇಟೆ ವೃತ್ತ ಅಬಕಾರಿ ನಿರೀಕ್ಷಕರ ಕಛೇರಿ ಆವರಣದಲ್ಲಿ ನಾಶ ಪಡಿಸಲಾಯಿತು.

ಗುಂಡ್ಲುಪೇಟೆ ಪೊಲೀಸ್ ಮತ್ತು ಅಬಕಾರಿ ಇಲಾಖೆಯಲ್ಲಿನ 29 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ವಿವಿಧ ಬ್ರಾಂಡ್ ಗಳ 150 ಲೀಟರ್ಗೂ ಹೆಚ್ಚು ಮದ್ಯವನ್ನ ಚಾಮರಾಜನಗರ ಅಬಕಾರಿ ಉಪ ಅಧೀಕ್ಷಕ ಎಂ.ಡಿ.ಮೋಹನ್ ಕುಮಾರ್ ಮತ್ತು ಗುಂಡ್ಲುಪೇಟೆ ಅಬಕಾರಿ ನಿರೀಕ್ಷಕ ತನ್ವಿರ್ ಮತ್ತು ಇತರ ಅಧಿಕಾರಿಗಳ ಸಮಕ್ಷಮದಲ್ಲಿ ನಾಶಪಡಿಸಲಾಯಿತು. ಇತ್ತೀಚಿಗೆ ಗ್ರಾಮಾಂತರ ಪ್ರದೇಶಗಳಿಗೆ ಮಾರಾಟ ಮಾಡಲು ಸಾಗಿಸಲಾಗ್ತಿದ್ದ ಮದ್ಯದ ಬಾಟಲಿ ಮತ್ತು ಪೌಚ್ ಗಳನ್ನ ವಶಕ್ಕೆ ಪಡೆದು ಮೊಕದ್ದಮೆಯನ್ನ ದಾಖಲು ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು