News Karnataka Kannada
Friday, April 12 2024
Cricket
ಚಾಮರಾಜನಗರ

ಬಿಲ್ ಬಾಕಿ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡದಂತೆ ಎಚ್ಚರಿಕೆ

ಬಿಲ್ ಬಾಕಿ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದರೆ ಮುಂದಾಗುವ ಅನಾಹುತಗಳಿಗೆ ಸೆಸ್ಕ್ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆ ಎಂದು ರೈತ ಸಂಘಟನೆ ಜಿಲ್ಲಾ ಉಪಾಧ್ಯಕ್ಷ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಪ್ಪ ಎಚ್ಚರಿಸಿದ್ದಾರೆ.
Photo Credit : News Kannada

ಗುಂಡ್ಲುಪೇಟೆ: ಬಿಲ್ ಬಾಕಿ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದರೆ ಮುಂದಾಗುವ ಅನಾಹುತಗಳಿಗೆ ಸೆಸ್ಕ್ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆ ಎಂದು ರೈತ ಸಂಘಟನೆ ಜಿಲ್ಲಾ ಉಪಾಧ್ಯಕ್ಷ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಪ್ಪ ಎಚ್ಚರಿಸಿದ್ದಾರೆ.

ಹಂಗಳ ಉಪವಿಭಾಗದ ಕಿರಿಯ ಇಂಜಿನಿಯರ್ ಮತ್ತು ಲೈನ್‍ಮನ್‍ಗಳು ಮನೆಗಳಲ್ಲಿ ಕುಟುಂಬದ ಮುಖ್ಯಸ್ಥರು ಇಲ್ಲದ ವೇಳೆ ಬಿಲ್ ಬಾಕಿ ಕಾರಣ ನೀಡಿ ಗ್ರಾಮದ ಹಲವು ಮನೆಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರು.

ಜಿಲ್ಲೆಯ ಇತರೆ ಕಡೆಗಳಂತೆ ನಮ್ಮ ಗ್ರಾಮದಲ್ಲಿ ಕರ ನಿರಾಕರಣ ಚಳುವಳಿ ನಡೆಸುತ್ತಿರುವ ಕಾರಣಕ್ಕೆ ವಿದ್ಯುತ್ ಬಿಲ್ ಬಾಕಿ ಪಾವತಿ ಮಾಡಿರುವುದಿಲ್ಲ. ಅಲ್ಲದೇ ಬಾಕಿ ಮನ್ನಾಕ್ಕೆ ಇಂಧನ ಸಚಿವರಲ್ಲಿ ರೈತ ಸಂಘಟನೆ ಮನವಿ ಮಾಡಿದೆ. ಬಾಕಿ ಮನ್ನಾ ಬಗ್ಗೆ ಭರವಸೆ ಸಿಕ್ಕಿದೆ. ಅಲ್ಲದೇ ರಾಜ್ಯ ಸರ್ಕಾರವೇ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ.
ಹೀಗಿರುವಾಗ ಏಕಾಏಕಿ ಮನೆಗಳ ವಿದ್ಯುತ್ ಸಂಪರ್ಕ ಕಡಿತ ಮಾಡುವುದು ಸರಿಯಲ್ಲ.

ನಮ್ಮ ಸಂಘಟನೆ ಮತ್ತು ಗ್ರಾಮಸ್ಥರ ಒತ್ತಾಯದ ಮೂಲಕ ಲೈನ್‍ಮನ್‍ಗಳಿಂದ ಮನೆಗಳಿಗೆ ವಿದ್ಯುತ್ ಮರು ಸಂಪರ್ಕ ಮಾಡಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಈ ರೀತಿಯ ವಿದ್ಯುತ್ ಸಂಪರ್ಕ ಕಡಿತದ ಕ್ರಮ ಮರುಕಳಿಸಬಾರದು. ಈ ರೀತಿ ಆದಲ್ಲಿ ಆಗುವ ವ್ಯತ್ಯಾಸಗಳಿಗೆ ಸೆಸ್ಕ್ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು