News Karnataka Kannada
Wednesday, April 24 2024
Cricket
ಚಾಮರಾಜನಗರ

ವೀರಪ್ಪನ್ ಗ್ಯಾಂಗ್ ಸದಸ್ಯೆಯಾಗಿದ್ದ ಸ್ಟೆಲ್ಲಾ ಮೇರಿಗೆ ಕ್ಲೀನ್​ಚಿಟ್

Mrry
Photo Credit : News Kannada

ಚಾಮರಾಜನಗರ: ರಾಮಾಪುರ ಪೊಲೀಸ್ ಠಾಣೆ ಮೇಲೆ ದಾಳಿ ಆರೋಪಿಯಾಗಿದ್ದ ಸ್ಟೆಲ್ಲಾ ಮೇರಿಗೆ ಚಾಮರಾಜನಗರ ಬಾಲ ನ್ಯಾಯ ಮಂಡಳಿ ಕ್ಲೀನ್​ಚಿಟ್ ನೀಡಿದೆ. ಪಾಲಾರ್ ಬಾಂಬ್ ಸ್ಫೋಟದ ಆರೋಪಿಯೂ ಆಗಿದ್ದ ಸ್ಟೆಲ್ಲಾ ಮೇರಿಯನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಬಾಲ ನ್ಯಾಯಮಂಡಳಿ ಆದೇಶ ಹೊರಡಿಸಿದೆ.

ಠಾಣೆ ಮೇಲಿನ ದಾಳಿ ಪ್ರಕರಣ ಸಂಬಂಧ 2020ರ ಫೆಬ್ರವರಿಯಲ್ಲಿ ಸ್ಟೆಲ್ಲಾ ಮೇರಿಯನ್ನು ಬಂಧಿಸಲಾಗಿತ್ತು. ಟಾಡಾ, ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಡಿ ಸ್ಟೆಲ್ಲಾ ಮೇರಿಯನ್ನು ಪೊಲೀಸರು ಬಂಧಿಸಿದ್ದರು.

ಸ್ಟೆಲ್ಲಾ ಮೇರಿಯನ್ನು ವೀರಪ್ಪನ್ ಸಹಚರ ಸುಂಡವಲಿಯಾರ್ ಅಪಹರಿಸಿ ಮದುವೆಯಾಗಿದ್ದ. ಈತ ಪೊಲೀಸ್ ಎನ್​ಕೌಂಟರ್‌ನಲ್ಲಿ ಬಲಿಯಾಗಿದ್ದ ಎಂದು ವಾದಿಸಲಾಗಿದೆ. ಸ್ಟೆಲ್ಲಾಮೇರಿಯನ್ನು ವೀರಪ್ಪನ್ ಸಹಚರ ಸುಂಡವಲಿಯಾರ್ (ಪೊಲೀಸ್ ಎನ್​‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ) ಎಂಬಾತ ಅಪಹರಿಸಿ ಮದುವೆಯಾಗಿದ್ದ ಎಂದು ವಾದಿಸಲಾಗಿದೆ. ವಾದ ಪುರಸ್ಕರಿಸಿದ ಬಾಲ ನ್ಯಾಯ ಮಂಡಳಿ, ಸ್ಟೆಲ್ಲಾ ಮೇರಿಯನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಆದೇಶಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು