ಕ್ರೈಸ್ತ ಸಮುದಾಯ ಅಕ್ರಮವಾಗಿ ಗೋರಿ ನಿರ್ಮಾಣ ಮಾಡಿಲ್ಲ: ಜೋಸ್ವಾ ಪ್ರಸನ್ನ ಕುಮಾರ್ ಸ್ಪಷ್ಟನೆ

ಗುಂಡ್ಲುಪೇಟೆ : ಸರ್ಕಾರಿ ಜಾಗದಲ್ಲಿ ಕ್ರೈಸ್ತ ಸಮುದಾಯದವರು ಅಕ್ರಮವಾಗಿ ಯಾವುದೇ ಗೋರಿಗಳನ್ನು ನಿರ್ಮಾಣ ಮಾಡಿಲ್ಲ ಎಂದು ಸೆಂಟ್ ಪೀಟರ್ಸ್ ಲೂಥರನ್ ಚರ್ಚ್‍ನ ಫಾದರ್ ಜೋಸ್ವಾ ಪ್ರಸನ್ನ ಕುಮಾರ್ ಸ್ಪಷ್ಟಪಡಿಸಿದರು.

ಪಟ್ಟಣದ ಸೆಂಟ್ ಪೀಟರ್ಸ್ ಚರ್ಚ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ವಿಜಯಪುರ ಸರ್ವೆ ನಂಬರ್ 102, 62, 61 ಮತ್ತು 105 ರ ಮಧ್ಯೆ ಇರುವ ಸರ್ಕಾರಿ ರಸ್ತೆ ಮತ್ತು ರಾಜ ಕಾಲುವೆಯಲ್ಲಿ ಕ್ರೈಸ್ತ ಸಮುದಾಯದವರು ಅಕ್ರಮವಾಗಿ ಗೋರಿಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ನಿವಾಸಿಗರು ಆರೋಪಿಸಿದ್ದಾರೆ.

ಆದರೆ ಸರ್ವೆ ನಂ-101ರಲ್ಲಿ ಸೇಂಟ್ ಪೀಟರ್ಸ್ ಲೂಥರನ್ ಚರ್ಚ್‍ನವರಿಗೆ 20 ಗುಂಟೆ ಜಾಗವನ್ನು 2000 ಇಸವಿಯಲ್ಲಿ ಕೊಳ್ಳೇಗಾಲ ಉಪ ವಿಭಾಗದ ಉಪ ವಿಭಾಗಾಧಿಕಾರಿಗಳು ಮಂಜೂರು ಮಾಡಿ ಸ್ಮಶಾನವಾಗಿ ಬಳಸಲು ಆದೇಶ ಹೊರಡಿಸಿದ್ದಾರೆ.

ಅಂದಿನಿಂದ ಇಂದಿನವರೆಗೂ ಸೇಂಟ್ ಪೀಟರ್ಸ್ ಲೂಥರನ್ ಚರ್ಚ್‍ನ ಸದಸ್ಯರು ಹಾಗೂ ಇತರೆ ಕ್ರೈಸ್ತರು ಅದನ್ನು ಬಳಸಿಕೊಂಡು ಬರುತ್ತಿದ್ದು, ಮೃತಪಟ್ಟ ಕ್ರೈಸ್ತರ ಶವ ಸಂಸ್ಕಾರವನ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

20 ಗುಂಟೆ ಜಾಗವನ್ನು ಸರ್ಕಾರ ಕ್ರೈಸ್ತ ಸಮುದಾಯಕ್ಕೆ ಸ್ಮಶಾನವಾಗಿ ಬಳಸಲು ಅಧಿಕೃತವಾಗಿ ನೀಡಿದೆ. ಹೀಗಾಗಿ ಅದನ್ನು ಅನಧಿಕೃತವಾಗಿ ಬಳಸುತ್ತಿದ್ದಾರೆ ಎಂಬ ನಿವಾಸಿಗರ ಆರೋಪದಲ್ಲಿ ಹುರುಳಿಲ್ಲ. ಅದು ಸ್ಮಶಾನಕ್ಕೆಂದೆ ಸರ್ಕಾರ ನೀಡಿರುವ ಸ್ಥಳವಾಗಿರುವ ಕಾರಣ ಶವಸಂಸ್ಕಾರ ಮಾಡಲು ಹಾಗೂ ಗೋರಿಗಳನ್ನು ಕಟ್ಟಲು ಅವಕಾಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಅಧಿಕೃತ ದಾಖಲೆಗಳಿದೆ ಎಂದು ಹೇಳಿದರು.

ಶವ ಸಂಸ್ಕಾರ ಮಾಡುವುದನ್ನು ಹಾಗೂ ಗೋರಿ ಕಟ್ಟುವುದನ್ನು ಪ್ರಶ್ನಿಸಲು ಹೋದ ಸ್ಥಳೀಯ ನಿವಾಸಿಗಳ ಮೇಲೆ ಕ್ರೈಸ್ತ ಸಮುದಾಯದವರು ದಬ್ಬಾಳಿಕೆ ಮಾಡಿ, ಬೆದರಿಕೆ ಹಾಕಿ, ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ.

ಆದರೆ ಗುಂಡ್ಲುಪೇಟೆಯ ಇತಿಹಾಸದಲ್ಲೇ ಕ್ರೈಸ್ತ ಸಮುದಾಯದವರು ಹೀಗೆ ದಬ್ಬಾಳಿಕೆ ಮಾಡಿ, ಬೆದರಿಕೆ ಹಾಕಿ, ಹಲ್ಲೆ ನಡೆಸಲು ಮುಂದಾದ ಉದಾಹರಣೆಗಳಿಲ್ಲ. ಕ್ರೈಸ್ತ ಸಮುದಾಯವು ಶಾಂತಿ, ಸಮಾಧಾನ, ಸಹನೆಗೆ ಹೆಸರಾಗಿದೆ, ನಮ್ಮಿಂದ ಇಂತಹ ಯಾವುದೇ ಕೃತ್ಯಗಳು ಜರುಗಿಲ್ಲ ಎಂದು ಸ್ಪಷ್ಟಪಡಿಸಿದರು.

ಆ ಜಾಗದಲ್ಲಿ ಸ್ಮಶಾನದಲ್ಲಿ ಶವಸಂಸ್ಕಾರ ಮಾಡುವುದು ಹಾಗೂ ಗೋರಿಗಳನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಸಹ ಯಾವುದೇ ಲೋಪಗಳನ್ನು ಎಸಗಿರುವುದಿಲ್ಲ. ಬದಲಿಗೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ರೂಪಿಸಿರುವ ಕಾನೂನು, ಚೌಕಟ್ಟಿನ ಪ್ರಕಾರ ಎಲ್ಲಾ ಪ್ರಕ್ರಿಯೆಗಳನ್ನೂ ನಡೆಸಿಕೊಂಡು ಬರಲಾಗುತ್ತಿದೆ.

ಆದ್ದರಿಂದ ಸ್ಮಶಾನದ ಜಾಗವನ್ನು ಸರ್ಕಾರವೇ ಕ್ರೈಸ್ತ ಸಮುದಾಯಕ್ಕೆ ಅಧಿಕೃತವಾಗಿ ಮಂಜೂರು ಮಾಡಿರುವ ಕಾರಣ ಪ್ರತಿಯೊಂದು ಕಾನೂನುಬದ್ಧವಾಗಿಯೇ ನಡೆಯುತ್ತಿವೆ. ಇಲ್ಲಿ ಯಾವುದೇ ಬಗೆಯ ಅನಧಿಕೃತ ಮತ್ತು ಅಕ್ರಮ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಹೇಳಿದರು.

Chaitra Kulal

Recent Posts

ಬೀದರ್: ಸಾಯಿಜ್ಞಾನ ಪಬ್ಲಿಕ್ ಶಾಲೆಗೆ ಶೇ. 100 ಫಲಿತಾಂಶ

ಸಾಯಿಜ್ಞಾನ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದಿದೆ.…

5 mins ago

ಎಸಿಯಲ್ಲಿ ಬೆಂಕಿ: ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

21 mins ago

ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮೃತ್ಯು

ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.

45 mins ago

ರಸ್ತೆ ತಿರುವಿನ ಅಪಾಯಕಾರಿ ವಿದ್ಯುತ್ ತಂತಿಗಳು: ಸುರಕ್ಷಿತ ಎತ್ತರಕ್ಕೆ ಏರಿಕೆ

ಸಾಣೂರಿನ ಲೈನ್ ಮ್ಯಾನ್  ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…

60 mins ago

ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ

ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…

1 hour ago

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

2 hours ago