ಚಾಮರಾಜನಗರ: ಜು.13, ಚಾಮರಾಜೇಶ್ವರಸ್ವಾಮಿ ರಥೋತ್ಸವ

ಚಾಮರಾಜನಗರ: ಕಳೆದ ಐದಾರು ವರ್ಷಗಳಿಂದ ನಡೆಯದಿದ್ದ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರ ಮಹಾರಥೋತ್ಸವವನ್ನು ಈ ಬಾರಿ ನಡೆಸಲು ತೀರ್ಮಾನಿಸಲಾಗಿದ್ದು, ಜುಲೈ 13ರಂದು ನಡೆಯಲಿದೆ.

ರಥ ಅಗ್ನಿಗೆ ಆಹುತಿಯಾದ ಬಳಿಕ ಹೊಸ ರಥದ ನಿರ್ಮಾಣ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ಸುಸಜ್ಜಿತವಾದ ನೂತನ ರಥವು ತಯಾರುಗೊಂಡಿದ್ದು, ಈಗಾಗಲೇ ದೇವಸ್ಥಾನದ ಆವರಣದಲ್ಲಿದೆ. ಈ ಸಂಬಂಧ ಹಲವು ವಿಧಿ ವಿಧಾನಗಳನ್ನು  ನಡೆಸಲಾಗಿದೆ.

ಮಹಾರಥೋತ್ಸವ ನಡೆಯುತ್ತಿರುವ ಸುದ್ದಿ ಭಕ್ತರಲ್ಲಿ ಹರ್ಷ ಮೂಡಿಸಿದೆ. ಆಷಾಢದಲ್ಲಿ ನಡೆಯುವ ಈ ರಥೋತ್ಸವಕ್ಕೆ ಜಿಲ್ಲೆಯ ಜನರು ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ, ರಾಜ್ಯದ ಜನರು ಆಗಮಿಸುವುದು ವಿಶೇಷ. ಅದರಲ್ಲೂ ನೂತನವಾಗಿ ವಿವಾಹವಾದ ನವದಂಪತಿಗಳು ರಥಕ್ಕೆ ಹಣ್ಣುಧವನ ಎಸೆಯುವುದು ವಿಶೇಷವಾಗಿದೆ.

ರಥೋತ್ಸವದ ಅಂಗವಾಗಿ ಚಾಮರಾಜೇಶ್ವರಸ್ವಾಮಿ ದೇಗುಲದಲ್ಲಿ ಜುಲೈ 6ರಿಂದ 17ರವರೆಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಜುಲೈ 6ರಂದು ಅಂಕುರಾರ್ಪಣ ಪೂರ್ವಕ ವೃಷಭಾಧಿವಾಸ, 7ರಂದು ಬೆಳಿಗ್ಗೆ 11.30ರಿಂದ 12ಗಂಟೆಗೆ ಕನ್ಯಾ ಲಗ್ನ ಮುಹೂರ್ತದಲ್ಲಿ ಧ್ವಜಾರೋಹಣ ಪೂರ್ವಕ ಬೇರಿತಾಡನಾನಂತರ ಶಿಭಿಕಾರೋಹಣೋತ್ಸವ, 8ರಂದು ಚಂದ್ರ ಮಂಡಲಾರೋಹಣೋತ್ಸವ, 9ರಂದು ಅನಂತ ಪೀಠಾರೋಹಣೋತ್ಸವ, 10ರಂದು ಪುಷ್ಪಮಂಟಪಾರೋಹಣೋತ್ಸವ, 11ರಂದು ವೃಷಭಾರೋಹಣೋತ್ಸವ, 12ರಂದು ವಸಂತೋತ್ಸವ ಪೂರ್ವಕ ಗಜವಾಹನೋತ್ಸವ ಕಾರ್ಯಕ್ರಮಗಳು ನಡೆಯಲಿವೆ.

ಜುಲೈ 13ರಂದು ಪೂರ್ವಾಷಾಢ ನಕ್ಷತ್ರದಲ್ಲಿ ರಥಸ್ಥಂ ವೃಷಭಾರೂಢಂ ಚಂದ್ರನಾಲಿಪ್ತ ತಾಂಡವಂ, ಸೋಪಹಾರಂ ಶಿವಂದೃಷ್ಟ್ವಾ ಪುನರ್ಜನ್ಮನವಿದ್ಯತೆ ಎಂಬ ಸಿದ್ಧಾಂತರೀತ್ಯ ಪ್ರಾತಃಕಾಲ 11 ರಿಂದ 11.30ರ ಶುಭ ಕನ್ಯಾ ಲಗ್ನದಲ್ಲಿ ಶ್ರೀಮನ್ಮಹಾರಥಾರೋಹಣ ನಡೆಯಲಿದೆ. ಅನಂತರ ಹಂಸಾರೋಹಣಾನಂತರ ನಟೇಶೋತ್ಸವ ಜರುಗಲಿದೆ.

ಜುಲೈ 14ರಂದು ಮೃಗಾಯಾತ್ರಾ ಪೂರ್ವಕ ಅಶ್ವಾರೋಹಣಾನಂತರ ಮಹಭೂತಾರೋಹಣ, ದೇವಿ ಪ್ರಣಯಕಲಹ ಸಂಧಾನೋತ್ಸವ, 15ರಂದು ಹಗಲು ಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥಸ್ನಾನ ರಾತ್ರಿ ಧ್ವಜಾವರೋಹಣ, ಮೌನಬಲಿ, 16ರಂದು ಪುಷ್ಪಯಾಗ ಪೂರ್ವಕ ಕೈಲಾಸಯಾನಾ ರೋಹಣೋತ್ಸವ, 17ರಂದು ಮಹಾಸಂಪ್ರೋಕ್ಷಣ ಪೂರ್ವಕ ನಂದಿವಾಹನೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು  ತಿಳಿಸಿದೆ.

Ashika S

Recent Posts

ವಿಧಾನಪರಿಷತ್ ಚುನಾವಣೆ : ನಾಮಪತ್ರ ಅಂಗೀಕಾರ,ತಿರಸ್ಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್

ರಾಜ್ಯ ವಿಧಾನ ಪರಿಷತ್​ಗೆ ನೈಋತ್ಯ, ಈಶಾನ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ…

10 mins ago

ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ : ಫೀಲ್ಡಿಂಗ್​ ಆಯ್ಕೆ

ಪ್ಲೇ ಆಫ್​ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​…

34 mins ago

ಶಿಕ್ಷಕ-ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ನಿಶ್ಚಿತ : ಜಾರ್ಜ್

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾದರಿಯಂ ತೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯಕರ್ತರುಗಳು ಅಭ್ಯರ್ಥಿಗಳ ಪರವಾಗಿ ಬೂತ್‌ಮಟ್ಟ ದಿಂದ…

2 hours ago

ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ವದ್ದು ಡಾ.ಮೋಹನ್‌ಕುಮಾರ್

ಆಸ್ಪತ್ರೆಯಲ್ಲಿ ಶುಶ್ರೂ?ಕಿಯರ ಪಾತ್ರ ಮಹತ್ವದ್ದು, ದಾದಿಯರು ಯಾ ವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲೇಗೌಡ ಜಿಲ್ಲಾ ಸ್ಪತ್ರೆ…

2 hours ago

ವಾಸವಿ ಯುವಜನ ಸಂಘದ ವತಿಯಿಂದ ಪ್ರಸಾದ ವಿತರಣೆ

ವಾಸವಿ ಜಯಂತಿ ಪ್ರಯುಕ್ತ ನಗರದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತೆಂದು ವಾಸವಿ…

2 hours ago

ನಟಿ ರಶ್ಮಿಕಾ ಟ್ವೀಟ್​ಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿವಾದಾದ್ಮಕ ಹೇಳಿಕೆ

ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿವಿಧ ಭಾಷೆಗಳಲ್ಲಿ ನಟಿಸಿ ಸೈ…

2 hours ago