News Karnataka Kannada
Tuesday, April 23 2024
Cricket
ಚಾಮರಾಜನಗರ

ಚಾಮರಾಜನಗರ: ಕೌಟುಂಬಿಕ ಕಲಹಕ್ಕೆ ಕುಟುಂಬ ಬಲಿ

Chamarajanagar: Family killed in family dispute
Photo Credit : By Author

ಚಾಮರಾಜನಗರ: ಆಸ್ತಿಗೆ ಸಂಬಂಧಿಸಿದ ಕೌಟುಂಬಿಕ ಕಲಹಕ್ಕೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬೇಡರಹುರ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ತಾಲ್ಲೂಕಿನ‌ ಬೇಡರಪುರ ಗ್ರಾಮದ ಮಹದೇವಸ್ವಾಮಿ (45), ಪತ್ನಿ ಸವಿತಾ (36) ಹಾಗೂ ಮಗಳು ಸಿಂಚನಾ (11) ಆತ್ಮಹತ್ಯೆ ಮಾಡಿಕೊಂಡವರು. ಆಸ್ತಿವಿಚಾರವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ಮೂವರು ಮನೆಯಲ್ಲೇ ಸಾವಿಗೆ ಶರಣಾಗಿದ್ದು ಡೆತ್‌ಸೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಸ್ತಿ ವಿಚಾರವಾಗಿ ಸಹೋದರಿಯರು ಕೋರ್ಟ್ ಮೆಟ್ಟಿಲೇರಿದ್ದರು. ಇತ್ತೀಚೆಗೆ ನ್ಯಾಯಾಲಯದಿಂದ ಆಸ್ತಿ ವಿವಾದ ತೀರ್ಮಾನವಾಗಿತ್ತು. ಆಸ್ತಿ ವಿವಾದ ತೀರ್ಪಿನ ನಂತರ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ, ಭಾವ ಮಲ್ಲೇಶ ಅಲಿಯಾಸ್‌ ದೇವಪ್ಪ, ಅಕ್ಕ ಮಂಜುಳ, ತಾಯಿ ದೇವಿರಮ್ಮ, ಮಹದೇವಪ್ಪ, ಮಹೇಶ್ವರಿ, ಮಹದೇವನ್ನು ಮೇಲಾಜಿಸುರ ಇವರಿಗೆ ಶಿಕ್ಷೆ ಕೊಡಬೇಕು ಎಂದು ಡೆತ್ ನೋಟ್‌ನಲ್ಲಿ ಬರೆಯಲಾಗಿದೆ. ನಮ್ಮ ಆಸ್ತಿ ಯಾವುದೇ ಕಾರಣ ಅವರಿಗೆ ಸಿಗಬಾರದು ಎಂದು ಬರೆದಿದ್ದಾರೆ.

ಮೂಲತಃ ಕೃಷಿಕರಾಗಿದ್ದು, ಸವಿತಾ ಟೈಲರಿಂಗ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಹಿರಿಯ ಮಗಳು ಕಾಲೇಜು ವ್ಯಾಸಂಗ ಮಾಡುತ್ತಿದ್ದು ತಾತನ ಮನೆಯಲ್ಲಿದ್ದಾಳೆ. ಕಿರಿಯ ಮಗಳು ಸಿಂಚನಾ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ತಂದೆ, ತಾಯಿ ಜೊತೆಯಲ್ಲಿದ್ದಳು. ಮೂವರು ಸಾವಿಗೆ ಶರಣಾಗಿದ್ದು ಇಡೀ ಗ್ರಾಮವೇ ಬೆಚ್ಚ ಬಿಟ್ಟಿದೆ. ಹಿರಿಯ ಮಗಳು ತಮ್ಮ ಜೊತೆ ಇಲ್ಲದ ಕಾರಣ ಸಾವಿನಿಂದ ಪಾರಾಗಿದ್ದಾಳೆ.

ಮೊದಲು ಹೆಂಡತಿ, ಮಗಳು ಸಾವಿಗೆ ಶರಣಾಗಿದ್ದು ನಂತರ ಮಹದೇವಸ್ವಾಮಿ ನೇಣು ಹಾಕಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಎಸ್ಪಿ ಪದ್ಮಿನಿ ಸಾಹೋ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು