ಚಾಮರಾಜನಗರ: ವೈದ್ಯರಿಗೆ ಹೊಸ ಆವಿಷ್ಕಾರದ ಅರಿವು ಅಗತ್ಯ – ಡಾ.ಸಂಜೀವ್

ಚಾಮರಾಜನಗರ:  ವೃತ್ತಿ  ನಿರತ ವೈದ್ಯರಿಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುವ ಕಾರ್ಯಾಗಾರಗಳು ಸಹಕಾರಿ ಎಂದು  ಸಿಮ್ಸ್ ಆಸ್ಪತ್ರೆಯ ನಿರ್ದೇಶಕ ಹಾಗೂ ಡೀನ್ ಡಾ.ಸಂಜೀವ್ ತಿಳಿಸಿದರು.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಿಮ್ಸ್ ಟೀಚರ್ ಅಸೋಸಿಯೇಶನ್ ವತಿಯಿಂದ ಮೆಡಿಕಲ್ ಕಾಲೇಜಿನ ಯಡಪುರದ ಸಿಮ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಐಎಂಎ, ಚಾಮರಾಜನಗರ; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಅಪೋಲೊ ಆಸ್ಪತ್ರೆ, ಮೈಸೂರು ಇವರ ಸಹಯೋಗದೊಂದಿಗೆ ಸಿ.ಎಂ.ಇ ಇನ್ ಆರ್ಗಾನ್ ಟ್ರಾನ್ಸ್ ಪ್ಲಾಂಟ್ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಚಾಮರಾಜನಗರ ಸಿಮ್ಸ್ ಆಸ್ಪತ್ರೆಯು ಹೊಸ ಹೊಸ ಅವಿಷ್ಕಾರಗಳನ್ನು ವೈದ್ಯರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಗಾರಗಳನ್ನು ನಡೆಸುತ್ತಿದೆ.   ಅಂಗಾಂಗ  ಕಸಿ ಕುರಿತು ಈಬಾರಿ ಕಾರ್ಯಗಾರ  ನಡೆಸಲಾಗುತ್ತಿದೆ. ಇದರ ಅವಶ್ಯಕ ವಿರುವ ರೋಗಿಗಳು ಜಿಲ್ಲೆಯ ಸಿಮ್ಸ್ ಆಸ್ಪತ್ರೆಯಲ್ಲಿ ಪ್ರಯೋಜನ ಪಡೆಯ ಬಹುದು ಎಂದು ಹೇಳಿದರು.

ಸಿಮ್ಸ್ ಟೀಚರ್ ಅಸೋಸಿಯೇಶನ್ ಅಧ್ಯಕ್ಷರಾದ ಡಾ. ಮಾರುತಿ ಸಿ.ವಿ ಅವರು ಮಾತನಾಡಿ ವೈದ್ಯ ವೃತ್ತಿಯಲ್ಲಿ ನಿರಂತರ ಅಭ್ಯಾಸದಿಂದ ಮಾತ್ರ ಮುಂದುವರೆದ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಬಹುದು. ವೈದ್ಯರು ಮತ್ತು ವಿದ್ಯಾರ್ಥಿಗಳಿಗೆ ಮುಂದುವರೆದ ಶಿಕ್ಷಣದ ಕುರಿತು ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ  ಎಂದರು.

ಸಿಎಂಇ ಕಾರ್ಯಕ್ರಮದಲ್ಲಿ ಅಪೋಲೋ ಆಸ್ಪತ್ರೆಯ ನುರಿತ ತಜ್ಞರಾದ ಡಾ. ಶ್ರೀನಿವಾಸ ನಲ್ಲೂರ್,   ಕಿಡ್ನಿ ಟ್ರಾನ್ಸ್ ಪ್ಲಾಂಟ್ ವಿಷಯದ ಬಗ್ಗೆ ಡಾ. ಯಶ್ವಂತ್‌ಕುಮಾರ್ ವಿ, ಆರ್ಗಾನ್ ರಿಟ್ರೈವಲ್ ಹಾಗೂ ಲಿವರ್ ಟ್ರಾನ್ಸ್ ಪ್ಲಾಂಟ್ ವಿಷಯದ ಬಗ್ಗೆ ಡಾ. ಹರೀಶ್ ಎಂ.ನಾಯಕ್,   ಆರ್ಗಾನ್ ಡೋನರ್ ಮ್ಯಾನೇಜ್‌ಮೆಂಟ್ ವಿಷಯದ ಬಗ್ಗೆ ವಿವರಗಳನ್ನು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕೃಷ್ಣಪ್ರಸಾದ್ ದಲ್ಲಿ ಮಾತನಾಡಿ ಸೋಟ್ಟೋ (ಸ್ಟೇಟ್ ಆರ್ಗಾನ್ ಅಂಡ್ ಟಿಶ್ಯೂಟ್ರಾನ್ಸ್‌ಪ್ಲಾಂಟ್ ಆರ್ಗನೇಜೇಶನ್) ಅಡಿಯಲ್ಲಿ ಮೈಸೂರನ್ನು ಪ್ರತ್ಯೇಕ ವಿಭಾಗವಾಗಿ ಗುರುತಿಸಿ ಮೈಸೂರು, ಹಾಸನ, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಆರ್ಗಾನ್ ಟ್ರಾನ್ಸ್‌ಪ್ಲಾಂಟ್ ಅನ್ನು ಪ್ರೋತ್ಸಾಹಿಸಲು ಮತ್ತು ಸ್ಥಳೀಯವಾಗಿ ಟ್ರಾನ್ಸ್‌ಪ್ಲಾಂಟ್ ಸೆಂಟರ್‌ಗಳನ್ನು ಆರಂಭಿಸಿ ಈಗಾಗಲೇ ಆರ್ಗಾನ್ ಟ್ರಾನ್ಸ್ ಪ್ಲಾಂಟ್ ಗಾಗಿ ನೋಂದಣಿಯಾಗಿರುವ ರೋಗಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆಯನುಸಾರ ಸೇವೆಯನ್ನು ಒದಗಿಸಬಹುದಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾರೀತಿಯ ಆರ್ಗಾನ್ ಟ್ರಾನ್ಸ್ ಪ್ಲಾಂಟ್‌ಗಾಗಿ ಅಪೋಲೊ ಬಿಜಿಎಸ್ ಆಸ್ಪತ್ರೆ, ಮೈಸೂರು ಅನ್ನು ಸಿಡಿಎ ಕ್ರಾಸ್-ಮ್ಯಾಚಿಂಗ್ ಸೆಂಟರ್ ಆಗಿ ಗುರುತಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಆಡಳಿತಾಧಿಕಾರಿ ಮಂಜುನಾಥ್ ಆರ್, ಸಿಮ್ಸ್ ಟೀಚರ್‍ಸ್ ಅಸೋಸಿಯೇಶನ್ ಅಧ್ಯಕ್ಷರು ಹಾಗೂ ಕೀಲು ಮೂಳೆ ವಿಭಾಗದ ಮುಖ್ಯಸ್ಥರಾದ ಡಾ. ಮಾರುತಿ ಸಿ.ವಿ, ಪ್ರಾಂಶುಪಾಲರಾದ ಡಾ. ಗಿರೀಶ್ ವಿ ಪಾಟೀಲ್, ಹೆಚ್‌ಎಸ್, ನಿವಾಸಿ ವೈದ್ಯಾಧಿಕಾರಿಗಳಾದ ಡಾ. ಮಹೇಶ್ ಎಂ, ಸಿಮ್ಸ್ ಟೀಚರ್‍ಸ್ ಅಸೋಸಿಯೇಶನ್ ಉಪಾಧ್ಕಕ್ಷ ಡಾ. ಅಜಯ್ ಕೆ.ಟಿ, ಸಿಮ್ಸ್ ಟೀಚರ್‍ಸ್ ಅಸೋಸಿಯೇಷನ್‌ನ ಖಜಾಂಚಿ ಡಾ. ನವೀನ್‌ಎನ್, ಸಿಮ್ಸ್‌ನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಸಿಮ್ಸ್ ಟೀಚರ್‍ಸ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಮತ್ತು ಅಪೋಲೊ ಆಸ್ಪತ್ರೆಯ ತಜ್ಞ ವೈದ್ಯರುಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸ್ವೀಫ್ ಸಮಿತಿ ಹಾಗೂ ಸಿಮ್ಸ್ ವತಿಯಿಂದ ಡಾ. ವೇದಶ್ರೀ ರವರು ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.

Ashika S

Recent Posts

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

21 mins ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

39 mins ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

53 mins ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

1 hour ago

ಪೆನ್‌ಡ್ರೈವ್‌ ಕೇಸ್‌ : ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌, ಮಹಿಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ, ವಕೀಲರೂ ಆಗಿರುವ ದೇವರಾಜೇಗೌಡರನ್ನು 14…

1 hour ago

ರೈತನ ಆರು ತಿಂಗಳ ಶ್ರಮ ಅರ್ಧಗಂಟೆಯಲ್ಲೇ ಹೋಮ

ಇಂದು ಸಂಜೆ ಸುರಿದ ಬಾರಿ ಮಳೆಗೆ ರೈತ ಬೆಳೆದಿದ್ದ ಬಾಳೆ ಫಸಲು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿಯಲ್ಲಿ…

2 hours ago