ಚಾಮರಾಜನಗರ: ಪೊಲೀಸ್ ಪೇದೆ ವಿರುದ್ಧ ವಿವಾಹಿತ ಮಹಿಳೆ ದೂರು

ಚಾಮರಾಜನಗರ: ವಿವಾಹಿತ ಮಹಿಳೆ ಜೊತೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದ ಚಾಮರಾಜನಗರ ಪೂರ್ವ ಠಾಣೆಯ ಪೊಲೀಸ್ ಪೇದೆಯೊಬ್ಬರ ವಿರುದ್ಧ ಸಂತ್ರಸ್ತ ಮಹಿಳೆಯೊಬ್ಬರು ನ್ಯಾಯ ಕೊಡಿಸುವಂತೆ ಮಹಿಳಾ ಠಾಣೆ ಮೆಟ್ಟಿಲೇರಿದ್ದಾರೆ.‌

ಚಾಮರಾಜನಗರ ತಾಲೂಕಿನ ಗ್ರಾಮವೊಂದರ 41 ವರ್ಷದ ಮಹಿಳೆ ಹಾಗೂ ಪೊಲೀಸ್ ಪೇದೆ ಕಳೆದ 2020 ರಿಂದ ಪರಿಚಿತರಾಗಿದ್ದು, ಪರಿಚಯ ಸಲುಗೆ ಪಡೆದುಕೊಂಡು ವಿವಾಹೇತರ ಸಂಬಂಧದ ತನಕ ಬಂದು ಮುಟ್ಟಿದೆ. ಇವರ ಕಹಾನಿ ಮತ್ತಷ್ಟು ಗಟ್ಟಿಯಾದ್ದರಿಂದ ಕಳೆದ ಕೆಲವು ತಿಂಗಳುಗಳಿಂದ ಚಾಮರಾಜನಗರದಲ್ಲೇ ಮನೆ ಮಾಡಿ ಇಬ್ಬರೂ ಲಿವಿಂಗ್ ಟುಗೆದರ್‌ನಲ್ಲಿದ್ದರಂತೆ. ಇದೀಗ ತಾನು ಅವರ ಜೊತೆಗೇ ಜೀವನ‌ ಸಾಗಿಸಬೇಕೆಂದು ವಿವಾಹಿತೆ ಪಟ್ಟು ಹಿಡಿದಿದ್ದಾರೆ.

‘ಪೊಲೀಸ್ ವಸತಿ‌ ನಿಲಯದಲ್ಲೇ ಇಬ್ಬರೂ ಲಿವಿಂಗ್ ಟುಗೆದರ್‌ನಲ್ಲಿದ್ದ ವೇಳೆ ದೇವರ ಫೋಟೋ ಮುಂದೆ ಅರಿಶಿನ ಕೊಂಬು ಕಟ್ಟಿದ್ದರು. ಮದುವೆ ಆಗಿ ಎರಡು ವರ್ಷಗಳಾಗುತ್ತಿದೆ. ಒಂದೂವರೆ ವರ್ಷ ಕ್ವಾಟ್ರಸ್ ನಲ್ಲಿದ್ದೆವು. ಕಳೆದ ಆರು ತಿಂಗಳುಗಳಿಂದ ಬಾಡಿಗೆ ಮನೆಯಲಿದ್ದೆವು. ಯಾವತ್ತೂ ನನ್ನನ್ನು ಬಿಟ್ಟು ಹೋಗಿದ್ದಿಲ್ಲ. ಆದರೆ ಇದೇ ಜೂನ್ 1ಕ್ಕೆ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಹೋದವರು ಮತ್ತೆ ವಾಪಸ್ ಬಂದಿಲ್ಲ. ಫೋನ್ ಮಾಡಿದರೆ, ನಾನು ಬರುವ ಪರಿಸ್ಥಿತಿಯಲ್ಲಿಲ್ಲ. ಮನೆಯವರು ನನಗೆ ಬೇರೆ ಮದುವೆ ಮಾಡಿಸುತ್ತಿದ್ದಾರೆ. ನೀನು ನಿನ್ನ ಜೀವನ ನೋಡಿಕೋ, ನಿನ್ನ ಮನೆಯವರ ಕಡೆ ಸೇರಿಕೋ ಎಂದು ಹೇಳುತ್ತಿದ್ದಾರೆ. ಆದರೆ ನನ್ನ ತಾಯಿ, ಮನೆಯವರು ಎಲ್ಲರೂ ನನ್ನನ್ನು ಬಿಟ್ಟು ಹಾಕಿದ್ದಾರೆ. ಅಂತರ್ಜಾತೀಯ ಮದುವೆಯಾಗಿದ್ದೇನೆ ಎಂದು ಮನೆಯವರೆಲ್ಲ ನನ್ನನ್ನು ಬಿಟ್ಟು ಹಾಕಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದಾರೆ.

”ನಾನು ಒಬ್ಬಳೇ ಅಲ್ಲ, ಇದಕ್ಕಿಂತ ಮೊದಲು ಒಬ್ಬರಿಗೆ ಹೀಗೆ ಮೋಸ ಮಾಡಿದ್ದಾರೆ. ಈ ವಿಚಾರದಲ್ಲಿ ನಾನು ಎರಡನೆಯವಳು. ಪೊಲೀಸ್ ಪೇದೆ ಜೊತೆಗಿನ ವಿವಾಹೇತರ ಸಂಬಂಧದ ವಾಟ್ಸಾಪ್ ಚಾಟ್, ಫೋಟೋಗಳ ಜೊತೆ ಸಂತ್ರಸ್ತ ಮಹಿಳೆ ತನಗೆ ತನ್ನ ಪ್ರಿಯಕರ ಬೇಕು, ಆತನ‌ ಜೊತೆ ಜೀವನ ನಡೆಸಬೇಕು’ ಎಂದು ದೂರಿನಲ್ಲಿ ಕೇಳಿಕೊಂಡಿದ್ದಾರೆ.

ಸದ್ಯ, ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಕಾನ್ಸ್‌ಸ್ಟೇಬಲ್ ಸೇರಿದಂತೆ ಅವರ ಪಾಲಕರ ವಿರುದ್ಧ ಮಹಿಳೆ ದೂರು ಕೊಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಈ ಸಂಬಂಧ ಸಂತ್ರಸ್ತೆ ಸುದ್ದಿಗೋಷ್ಟಿ ನಡೆಸಿ, ತನಗಾದ ಅನ್ಯಾಯದ ಬಗ್ಗೆ ಹೇಳಿಕೊಂಡ ಬಳಿಕ ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Ashika S

Recent Posts

ಪಕ್ಷಿಗಳಿಗೆ ಆಹಾರ ನೀಡುತ್ತಿರುವ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು

ವಿದ್ಯಾಕಾಶಿ ಧಾರವಾಡದಲ್ಲಿ ಕೆಎಲ್‌ಇ ಸಂಸ್ಥೆಯ ಬಿಬಿಎ ಕಾಲೇಜಿನ ವಿದ್ಯಾರ್ಥಿಗಳು ಪಕ್ಷಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

9 mins ago

ನರೇಂದ್ರ ದಾಭೋಲ್ಕರ್​ ಹತ್ಯೆ ಕೇಸ್: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಸುಮಾರು 11 ವರ್ಷಗಳ ನಂತರ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು…

28 mins ago

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ನಗರದಲ್ಲಿ ರಾಜಕೀಯ ವೈಷಮ್ಯದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ…

38 mins ago

ಬೀದರ್: ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ‌ ಆಚರಣೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

1 hour ago

ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ.…

1 hour ago

ಧಾರವಾಡದ ಪೇಡಾ ಈ ಬಾರಿ ಯಾರ ಬಾಯಿಗೆ ಬೀಳಲಿದೆ?; ಜೋಶಿ ವಿರುದ್ಧ ವಿನ್ ಆಗ್ತಾರಾ ವಿನೋದ್

ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ,…

1 hour ago