News Karnataka Kannada
Sunday, April 21 2024
Cricket
ಚಾಮರಾಜನಗರ

ಗ್ರಾಹಕರ ಹಣವನ್ನು ಗುಳುಂ ಎನಿಸಿದ ಎಸ್ ಬಿಐ ಬ್ಯಾಂಕ್ ನ‌ ಕ್ಯಾಷ್ ಆಫೀಸರ್

ಗ್ರಾಹಕರು ತಮ್ಮ‌ ಖಾತೆಗಳಿಗೆ ಕಟ್ಟಿದ್ದ ಹಣವನ್ನು ಜಮೆ ಮಾಡದೇ ಲಕ್ಷಾಂತರ ರೂ. ಹಣ ಗುಳುಂ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ‌ ಸಂತೇಮರಹಳ್ಳಿ ಎಸ್ಬಿಐ ಬ್ಯಾಂಕ್ ನಲ್ಲಿ ನಡೆದಿದೆ.
Photo Credit : NewsKarnataka

ಚಾಮರಾಜನಗರ: ಗ್ರಾಹಕರು ತಮ್ಮ‌ ಖಾತೆಗಳಿಗೆ ಕಟ್ಟಿದ್ದ ಹಣವನ್ನು ಜಮೆ ಮಾಡದೇ ಲಕ್ಷಾಂತರ ರೂ. ಹಣ ಗುಳುಂ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ‌ ಸಂತೇಮರಹಳ್ಳಿ ಎಸ್ಬಿಐ ಬ್ಯಾಂಕ್ ನಲ್ಲಿ ನಡೆದಿದೆ.

ಸಂತೇಮರಹಳ್ಳಿ ಶಾಖೆಯ ಎಸ್ ಬಿಐ ಬ್ಯಾಂಕ್ ನ‌ ಕ್ಯಾಷ್ ಆಫೀಸರ್ ಮನೋರಂಜನ್ ಮುರ್ಮು ಎಂಬಾತ ಸ್ವಸಹಾಯ ಸಂಘಗಳ ಸಾಲ‌ ಮರುಪಾವತಿ ಹಣವನ್ನು ಜಮೆ ಮಾಡದೇ ಗುಳುಂ‌ ಮಾಡಿರುವ ಆರೋಪಿ. ಬರೋಬ್ಬರಿ 26,15,920 ರೂ. ಹಣವನ್ನು ಸ್ವಂತ ಬಳಕೆ ಮಾಡಿಕೊಂಡಿದ್ದಾನೆ ಎಂದು ಬ್ಯಾಂಕ್ ವ್ಯವಸ್ಥಾಪಕರು ದೂರು ಕೊಟ್ಟಿದ್ದಾರೆ.

ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಡಿ ಕೆಲವು ಸ್ವ-ಸಹಾಯ ಸಂಘಗಳು ಸಾಲ ಪಡೆದು ಸಾಲ ಮರುಪಾವತಿ ಮಾಡುತ್ತಿದ್ದರು. ಆದರೆ, ಹಣವನ್ನು ಖಾತೆಗಳಿಗೆ ಜಮೆ ಮಾಡದೇ ಕೌಂಟರ್ ಚಲನ್ ನ್ನು ಗ್ರಾಹಕರಿಗೆ ಕೊಟ್ಟು ಯಾಮಾರಿಸಿದ್ದಾನೆ ಎಂದು ದೂರು ಕೊಡಲಾಗಿದೆ.

ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು