News Karnataka Kannada
Wednesday, April 24 2024
Cricket
ಚಾಮರಾಜನಗರ

ಚಾಮರಾಜನಗರ: ಕಡವೆ ಒಣ ಮಾಂಸ ಪತ್ತೆ, ಓರ್ವ ಬಂಧನ

ಅಕ್ರಮವಾಗಿ ಮನೆಯಲ್ಲಿ ಕಡವೆ ಒಣ ಮಾಂಸ ಶೇಖರಣೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಜೀವಿ ಧಾಮದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
Photo Credit : News Kannada

ಚಾಮರಾಜನಗರ: ಅಕ್ರಮವಾಗಿ ಮನೆಯಲ್ಲಿ ಕಡವೆ ಒಣ ಮಾಂಸ ಶೇಖರಣೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಜೀವಿ ಧಾಮದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಿಣ್ಯಂ ಗ್ರಾಮದ ಗೋವಿಂದ (50) ವರ್ಷ ಬಂಧಿತ ಆರೋಪಿ. ಈತ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದ ಮಿಣ್ಯಂ ಶಾಖೆಯ ಗಾಜನೂರು ಗಸ್ತಿನ ವ್ಯಾಪ್ತಿಯ ಗೋವಿಂದ ತೋಟದ ವಾಸದ ಮನೆಯಲ್ಲಿ ಕಡವೇ ಒಣ ಮಾಂಸ ಶೇಖರಣೆ ಮಾಡಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು.

ಈ ಹಿನ್ನಲೆಯಲ್ಲಿ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ 7 ಕೆ.ಜಿ.ಯಷ್ಟು ಕಡವೆ ಮಾಂಸವನ್ನು ವಶಕ್ಕೆ ಪಡೆದು ವನ್ಯಜೀವಿ ಅಪರಾಧ ಕಾನೂನಿಡಿ ಪ್ರಕರಣ ದಾಖಲಿಸಿ ಬಂಧಿತ ಗೋವಿಂದನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು