ಪಿರಿಯಾಪಟ್ಟಣ: ದನದ ಮಾಂಸ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಟ್ಟದಪುರ ಪೊಲೀಸರು ಬಂಧಿಸಿ, ಮೂವತ್ತೆಂಟು ಕೆಜಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಮುನೀಬ್ ಖಾನ್, ವಾಸಿಂ ಪಾಷ, ಭಾಷಾ ಅಹ್ಮದ್ ಬಂಧಿತರಾಗಿದ್ದಾರೆ. ಇವರು ತಾಲ್ಲೂಕಿನ ಬೆಟ್ಟದಪುರ ಸಮೀಪದ ಹಲಗನಹಳ್ಳಿ ಗ್ರಾಮದ ಜಮೀನಿನೊಂದರಲ್ಲಿ ದನವನ್ನು ಕೊಂದು ಮಾಂಸ ಮಾಡಿ ಅದನ್ನು ಮಾರಾಟ ಮಾಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಬೆಟ್ಟದಪುರ ಆರಕ್ಷಕ ಠಾಣೆ ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಎಂ ಎತ್ತಿನಮನಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಈ ವೇಳೆ ಆರೋಪಿಗಳಾದ ಮುನೀಬ್ ಖಾನ್, ವಾಸಿಂ ಪಾಷ, ಭಾಷಾ ಅಹ್ಮದ್ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳಿಂದ ಸುಮಾರು 38 ಕೆ.ಜಿ 300 ಗ್ರಾಂ ತೂಕದ ದನದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ,
ಕಾರ್ಯಾಚರಣೆಯಲ್ಲಿ ಬೆಟ್ಟದಪುರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಎಂ ಎತ್ತಿನಮನಿ ಸಿಬ್ಬಂದಿಗಳಾದ ಮಂಜುನಾಥ್, ದಿಲೀಪ್, ಮಧು, ರಮೇಶ್, ಅಶೋಕ್ ಭಾಗವಹಿಸಿದ್ದರು.