ಜ್ವರದಿಂದ ಬಳಲುತ್ತಿರುವ ದೊಡ್ಡಾಣೆ ಜನರ ಆರೋಗ್ಯ ತಪಾಸಣೆ

ಚಾಮರಾಜನಗರ: ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಕುಗ್ರಾಮವಾದ ದೊಡ್ಡಾಣೆಯಲ್ಲಿ ಜನರು ಶೀತ, ಜ್ವರ, ಮೈಕೈನೋವು, ನೆಗಡಿಯಿಂದ ಬಳಲುತ್ತಿರುವುದು ಭಾರೀ ಸುದ್ಧಿಯಾಗಿತ್ತು. ಇದೀಗ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ತಂಡ ಗ್ರಾಮಕ್ಕೆ ಭೇಟಿ ನೀಡಿ  ಆರೋಗ್ಯ ತಪಾಸಣೆ ನಡೆಸಿದ್ದು, ಪ್ರತಿ ಶನಿವಾರ ಗ್ರಾಮಕ್ಕೆ ವೈದ್ಯರು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುವ ವ್ಯವಸ್ಥೆ ಮಾಡಲಾಗಿದೆ.

ಬೆಟ್ಟಗುಡ್ಡಗಳ ನಡುವೆ ಸಮರ್ಪಕ ರಸ್ತೆ ಸೌಲಭ್ಯ ಇಲ್ಲದ ದೊಡ್ಡಾಣೆ ಗ್ರಾಮದಲ್ಲಿ 60 ರಿಂದ 70 ಜನರು ಜ್ವರ, ಶೀತ, ನೆಗಡಿ, ಕೆಮ್ಮು ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇವರು ಆಸ್ಪತ್ರೆಗೆ ಬರಬೇಕಾದರೆ ಸುಮಾರು 12 ಕಿ.ಮೀ. ನಡೆದು ಬರಬೇಕು. ತೀವ್ರ ಅನಾರೋಗ್ಯಕ್ಕೆ ಒಳಗಾದವರನ್ನು ಡೋಲಿಯಲ್ಲಿ ಹೊತ್ತು ತರಬೇಕಾಗಿದೆ. ಈಗಾಗಲೇ ಜನರೆಲ್ಲ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಗ್ರಾಮದಿಂದ  ಆಸ್ಪತ್ರೆಗೆ ಧಾವಿಸಲು ತೊಂದರೆ ಉಂಟಾಗಿತ್ತು.

ಈ ವಿಷಯ ಹೊರ ಬರುತ್ತಿದ್ದಂತೆಯೇ  ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತುರ್ತಾಗಿ ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಅದರಂತೆ  ಮಾರ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ರಾಜೇಶ್, ಇನ್ನಿತರ ಆರೋಗ್ಯ ಸಿಬ್ಬಂದಿ  ಗ್ರಾಮಕ್ಕೆ ಅರಣ್ಯ ಇಲಾಖೆಯ ವಾಹನದಲ್ಲಿ ಗ್ರಾಮದ ಶಾಲೆಯಲ್ಲಿ ಗ್ರಾಮಸ್ಥರ ಆರೋಗ್ಯವನ್ನು ಪರೀಕ್ಷಿಸಿ ಅಗತ್ಯ ಔಷಧಿಗಳನ್ನು ನೀಡಿದ್ದಾರೆ.

ಈ ಕುರಿತಂತೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ ಅವರು,  ಗ್ರಾಮಸ್ಥರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು,ಕೋವಿಡ್ ಅಥವಾ ಬೇರೆ ಕಾರಣದಿಂದ ಜ್ವರದಿಂದ ಬಳಲುತ್ತಿರಬಹುದೇ ಎಂಬ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇನ್ನು ಮುಂದೆ ಪ್ರತೀ ಶುಕ್ರವಾರ ಅಥವಾ ಶನಿವಾರದಂದು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ನೆರವಿನೊಂದಿಗೆ ಗ್ರಾಮದಲ್ಲೇ ಆರೋಗ್ಯ ತಪಾಸಣೆ ನಡೆಸಿ ಔಷಧೋಪಚಾರ ಕ್ರಮಗಳಿಗೆ ಆರೋಗ್ಯ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

Swathi MG

Recent Posts

ನಟ ಚೇತನ್​ ಚಂದ್ರ ಮೇಲೆ 20 ಜನರಿಂದ ಹಲ್ಲೆ : ದೂರು ದಾಖಲು

ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಯುವ ನಟ ಚೇತನ್ ಚಂದ್ರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆದಿದೆ. ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ…

3 mins ago

ಪೆನ್​ಡ್ರೈವ್ ಹಂಚಿಕೆ ಪ್ರಕರಣ : ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಹರಿಬಿಟ್ಟ ಆರೋಪದಲ್ಲಿ ಬಂಧನವಾಗಿರುವ ಆರೋಪಿಗಳಾದ ಚೇತನ್ ಹಾಗೂ ಲಿಖಿತ್‌ಗೆ 14…

18 mins ago

ಇಂದಿನ ರಾಶಿ ಭವಿಷ್ಯ : ಈ ರಾಶಿಗೆ ಹಣಕಾಸಿನ ಸಮಸ್ಯೆ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 13 ಮೇ​​ 2024ರ…

30 mins ago

96 ಲೋಕಸಭಾ ಕ್ಷೇತ್ರಗಳಲ್ಲಿ ಇಂದು 4ನೇ ಹಂತದ ಮತದಾನ

ಲೋಕಸಭೆ ಚುನಾವಣೆಯ (4ನೇ ಹಂತವು ಇಂದು (ಮೇ 13) 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಇಂದು 96…

42 mins ago

ಅನೈತಿಕ ಸಂಬಂಧ ಶಂಕೆ: ಬೀದರ್​​ನಲ್ಲಿ ಯುವಕರಿಂದ ನೈತಿಕ ಪೊಲೀಸ್​ ಗಿರಿ

ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್​​…

9 hours ago

ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪಿ ಸೆರೆ

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ  ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು…

9 hours ago