ಚಾಮರಾಜನಗರ: ಎಲ್ಲೆಡೆ ಅಪ್ಪು ಅಭಿಮಾನ ಮೆರೆಯಲಾಗುತ್ತಿದ್ದು ಅದರಂತೆ ತವರು ಜಿಲ್ಲೆ ಚಾಮರಾಜನಗದ ಕೊಳ್ಳೇಗಾಲದ ಅತಿ ದೊಡ್ಡ ರಸ್ತೆಗೆ ಪುನೀತ್ ರಾಜ್ ಕುಮಾರ್ ಎಂದು ನಾಮಕರಣ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಅಚ್ಗಾಳ್ ಸರ್ಕಲ್ ನಿಂದ ತಾಲೂಕು ಪಂಚಾಯತ್ ವೃತ್ತದವರಗಿರುವ ಸುಮಾರು ಒಂದು ಕಿ.ಮೀ ಉದ್ದದ ರಸ್ತೆಗೆ “ಯುವರತ್ನ ಪುನೀತ್ ರಾಜ್ ಕುಮಾರ್” ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕದ ಬೋರ್ಡ್ ಹಾಕಿಸುವ ಮೂಲಕ ಸ್ಥಳೀಯ ಶಾಸಕ ಎನ್.ಮಹೇಶ್ ನೇತೃತ್ವದಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಪೂಜೆ ಸಲ್ಲಿಸಿ ಅನಾವರಣ ಮಾಡಲಾಯಿತು. ಬಳಿಕ ಮಾತನಾಡಿದ ಅವರು ಡಾ.ರಾಜ್ ಕುಮಾರ್ ಕುಟುಂಬದವರು ದೇಶ ಹಾಗೂ ರಾಜ್ಯಕ್ಕೆ ಸಾಂಸ್ಕೃತಿಕ, ಸಾಮಾಜಿಕ ರಾಯಭಾರಿಗಳಾಗಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರಲ್ಲದೆ, ಇಂತಹ ಕುಟುಂಬದ ಋಣ ತೀರಿಸಲು ಸಾಧ್ಯವಿಲ್ಲ ಎಂದರು.