ಆಹಾರ ಸಂಸ್ಕರಣ ಘಟಕದಲ್ಲಿದ್ದ ಮಹಿಳೆ ಆತ್ಮಹತ್ಯೆಗೆ ಕಾರಣವೇನು?

ಚಾಮರಾನಗರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಹಾರ ಸಂಸ್ಕರಣ ಘಟಕದಲ್ಲಿ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಆಹಾರ ಸಂಸ್ಕರಣ ಘಟಕದ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಹಾರ ಸಂಸ್ಕರಣ ಘಟಕದಲ್ಲಿ ಪ್ಯಾಕಿಂಗ್ ಮಾಡುತ್ತಿದ್ದ ಹೊರೆಯಾಲ ಗ್ರಾಮದ ಮಹದೇವಮ್ಮ (45) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳಾ ನೌಕರಳಾಗಿದ್ದಾರೆ.

ಬೇಗೂರು ಗ್ರಾಮದಲ್ಲಿರುವ ಆಹಾರ ಸಂಸ್ಕರಣ ಘಟಕದಲ್ಲಿ 17 ಮಂದಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಎರಡು ಪಾಳಿಯದಲ್ಲಿ ಮಹಿಳಾ ನೌಕರರ ಕೆಲಸ ಮಾಡುತ್ತಿದ್ದರು. ಪ್ರತಿ ನಿತ್ಯ ಬೆಳೆಗ್ಗೆ 8.30 ಆಟೋದಲ್ಲಿ ಹೊರೆಯಾಲದಿಂದ ಬೇಗೂರಿಗೆ ಬರುತ್ತಿದ್ದ ಮೃತ ಮಹದೇವಮ್ಮ, ಸೋಮವಾರ ಸಂಜೆ ಆಹಾರ ಸಂಸ್ಕರಣ ಘಟಕದ ಬೀಗದ ಕೀ ತೆಗೆದು ಕೊಂಡಿದ್ದರು ಎನ್ನಲಾಗಿದೆ.

ಸಾರ್ವಜನಿಕರು ಹೇಳುವಂತೆ ಪ್ರಕಾರ ಫುಡ್ ಪ್ಯಾಕಿಂಗ್ ಮಾಡುವಾಗ ಕಡಿಮೆ ತೂಕ ಮಾಡಲಾಗುತ್ತಿತ್ತು ಒಂದು ಕೆಜಿ ಆಹಾರ ಧಾನ್ಯದ ಬದಲು 850 ಗ್ರಾಮ್ ಪ್ಯಾಕ್ ಮಾಡಲಾಗ್ತಿತ್ತು ಎಂಬ ಆರೋಪ ಮಾಡಿದ್ದಾರೆ, ಈ ಅವ್ಯವಹಾರ ಹೊರಗೆ ಗೊತ್ತಾದ್ರೆ ಅವಮಾನ ಆಗುತ್ತೆ ಎಂದು ಮಹದೇವಮ್ಮ ಆಹಾರ ಸಂಸ್ಕರಣ ಘಟಕದ ಕೊಠಡಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಸಿಡಿಪಿಓ ಚೆಲುವರಾಜು ಆಗಮಿಸಿದ ಸಂದರ್ಭದಲ್ಲಿ ಮೃತ ಮಹದೇವಮ್ಮ ಕಡೆಯವರು ತರಾಟೆಗೆ ತೆಗೆದುಕೊಂಡರು. ಬೇಗೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಶವ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ.

Raksha Deshpande

Recent Posts

ನಾಳೆ ಪ್ರಚಾರ ನಿಮಿತ್ಯ ಕಲಬುರಗಿಯ ಸೇಡಂ ತಾಲೂಕಿಗೆ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಳೆ ಸೇಡಂಗೆ ಆಗಮಿಸಲಿದ್ದು, ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ…

1 hour ago

ಅಧಿಕಾರಕ್ಕಾಗಿ ಮಾನವಿಯತೆ ಮರೆತಿದ್ದಾರೆ ಖಂಡ್ರೆ : ಭಗವಂತ ಖೂಬಾ

ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಈಶ್ವರ ಖಂಡ್ರೆ, ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೆಬೆಕೆನ್ನುವ ಉದ್ದೇಶದಿಂದ, ಮನುಷ್ಯತ್ವ, ಮಾನವಿಯತೆ ಮರೆತು ಬಿಟ್ಟಿದ್ದಾರೆ,…

1 hour ago

ಕಾಂಗ್ರೆಸ್‌ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ: ಯತ್ನಾಳ್‌

'ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ…

1 hour ago

ನಾಳೆಯಿಂದ ಪಿಯುಸಿ 2ನೇ ವಾರ್ಷಿಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಸ್‌ ಪ್ರಯಾಣ ಫ್ರೀ

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಏಪ್ರಿಲ್ 29 ರಿಂದ ಮೇ…

2 hours ago

ಸೆಲ್ಫಿ ತೆಗೆಯುವಾಗ ಕೆರೆಗೆ ಬಿದ್ದ ಮಗಳು : ಕಾಪಾಡಲು ಹೋದ ತಂದೆಯೂ ಸಾವು

ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳ ರಕ್ಷಣೆಗೆ ಹೋಗಿ ತಂದೆಯೂ ಸಾವನ್ನಪ್ಪಿದ ಧಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ…

2 hours ago

ಯತ್ನಾಳ್ ಬಾಯಿ, ಬೊಂಬಾಯಿ : ಸಚಿವ ಎಂ.ಬಿ‌.ಪಾಟೀಲ್ ತಿರುಗೇಟು

ಬಸನಗೌಡ ಪಾಟೀಲ್ ಯತ್ನಾಳ್ ಬಾಯಿ, ಬೊಂಬಾಯಿ. ಅವ್ರು, ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ, ಮಲಗಿ ಎಚ್ಚರಾದ್ಮೇಲೆ ಒಂದು ಹೇಳ್ತಾರೆ. ಇವ್ರ ಮಾತನ್ನ…

2 hours ago