News Karnataka Kannada
Thursday, April 18 2024
Cricket
ಚಾಮರಾಜನಗರ

ಮುಸ್ಲಿ ಕುಟುಂಬದಿಂದ ಜಮೀನಿನಲ್ಲಿ ಪ್ರತಿಭಟನೆ

Piriya
Photo Credit :

ಪಿರಿಯಾಪಟ್ಟಣತಾಲ್ಲೂಕಿನ ಮುಮ್ಮಡಿ ಕಾವಲು ಗ್ರಾಮದಲ್ಲಿನ ಸರ್ವೆ ನಂಬರ್ 1/89 ರಲ್ಲಿನ 3 ಎಕರೆ ಸಾಗುವಳಿ ಜಮೀನನ್ನು ಬಿಡಿಸಿಕೊಡುವಂತೆ ಒತ್ತಾಯಿಸಿ ಮುಸ್ಲಿ ಕುಟುಂಬವೊಂದು ಜಮೀನಿನ ಬಳಿ ಪ್ರತಿಭಟನೆ ನಡೆಸಿದರು.

 ಮುಮ್ಮಡಿ ಕಾವಲು  ಗ್ರಾಮದ ಸೈಯದ್ ಕರಿಮ್ ಎಂಬುವರಿಗೆ 3 ಎಕರೆ ಜಾಗವನ್ನು ಸಾಗುವಳಿ ನೀಡಲಾಗಿತ್ತು. ಆದರೆ  ಜಾಗವನ್ನು ಕೆಲವರು ಬಲವಂತದಿಂದ ವಶಪಡಿಸಿಕೊಂಡು ಉಳುಮೆ ಮಾಡಿ ಬೇಸಾಯ ಮಾಡುತ್ತಿದ್ದಾರೆ.

 ಸೈಯದ್ ಕರೀಂ ಮರಣಹೊಂದಿದ್ದು ಇವರ ಮಕ್ಕಳಾದ ಸೈಯದ್ ಅಮಾನುಲ್ಲಾಸೈಯದ್ ಸನಾವುಲ್ಲಾಸೈಯದ್ ಸಮ್ರಿನ್ಸೈಯದ್  ಅಮ್ರಿನ್ ಅವರು ತಮ್ಮ ಕುಟುಂಬದವರೊಂದಿಗೆ ಜಮೀನಿನ ಬಳಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

ಅನೇಕ ನ್ಯಾಯಾಲಯಗಳು ಜಮೀನು ತಮ್ಮಂತೆ ಎಂದು ಆದೇಶ ನೀಡಿದ್ದರೂ  ಸ್ಥಳೀಯ ಪೊಲೀಸ್ ಕಂದಾಯ ಹಾಗೂ ಭೂಮಾಪನ ಇಲಾಖೆಯ ಅಧಿಕಾರಿಗಳು ತಮಗೆ ಜಮೀನು ಬಿಡಿಸಿಕೊಡುವಲ್ಲಿ ಮೀನಾಮೇಷ  ಎಣಿಸುತ್ತಿದ್ದಾರೆ.

ಇದರಿಂದ ತಮ್ಮ ಕುಟುಂಬಕ್ಕೆ ತೀವ್ರ ತೊಂದರೆ ಉಂಟಾಗಿದೆಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು  ಬಗ್ಗೆ ಗಮನಹರಿಸಿ ಶೀಘ್ರದಲ್ಲಿ ತಮಗೆ ಜಮೀನನ್ನು ಬಿಡಿಸಿ ಕೊಡಬೇಕೆಂದು ಮನವಿ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು