News Karnataka Kannada
Thursday, April 18 2024
Cricket
ಚಾಮರಾಜನಗರ

ಮಲೆಮಹದೇಶ್ವರ ದೇಗುಲದಲ್ಲಿ 2.13ಕೋಟಿ ಸಂಗ್ರಹ

Male Madeshwara
Photo Credit : News Kannada

ಚಾಮರಾಜನಗರ : ರಾಜ್ಯದಲ್ಲಿಯೇ ಅತಿ ಹೆಚ್ಚು ಆದಾಯ ತಂದುಕೊಡುವ ದೇಗುಲಗಳಲ್ಲಿ ಒಂದಾಗಿರುವ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ಒಡೆಯ ಮಹದೇಶ್ವರ ಕೋಟಿ ಒಡೆಯನಾಗಿ ಮುಂದುವರೆದಿದ್ದಾನೆ.

ಕಳೆದ ಕೆಲವು ವರ್ಷಗಳಿಂದ ಇಲ್ಲಿನ ದೇಗುಲದಲ್ಲಿ ಸಂಗ್ರಹವಾಗುವ ಕಾಣಿಕೆ ಹಣ ಕೋಟಿಯನ್ನು ಮೀರುತ್ತಿದ್ದು, ಈ ಬಾರಿ28 ದಿನಗಳ ಅಂತರದಲ್ಲಿ ಪವಾಡ ಪುರುಷ ಮಹದೇಶ್ವರ ನೆಲೆತಾಣ ಮಲೆ‌ಮಹದೇಶ್ವರ ಬೆಟ್ಟದ ದೇಗುಲದ ಹುಂಡಿಯಲ್ಲಿ ರೂ.2 ಕೋಟಿ 13 ಲಕ್ಷ 53 ಸಾವಿರದ 95 ಸಂಗ್ರಹ ವಾಗಿದೆ.

ಕೊರೊನಾ ನಿಯಮಗಳನ್ನು ಸಡಿಲಗೊಳಿಸಿ ವಿಶೇಷ ಪೂಜೆ, ಸೇವೆ, ಜಾತ್ರೆಗಳಿಗೆ ಅವಕಾಶ ಮಾಡಿಕೊಟ್ಟಿರುವ ಕಾರಣ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಕಾಣಿಕೆ ಹಣವೂ ಹರಿದು ಬರುತ್ತಿದೆ. ಭಕ್ತರು ಕಾಣಿಕೆ ಹಣವಲ್ಲದೆ, 45 ಗ್ರಾಂ ಚಿನ್ನ 1 ಕೆಜಿ 900 ಗ್ರಾಂ ಬೆಳ್ಳಿ ಪದಾರ್ಥಗಳನ್ನು ದೇವರಿಗೆ ಅರ್ಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು