News Karnataka Kannada
Thursday, April 25 2024
ಚಾಮರಾಜನಗರ

ಪ್ರೇಮಿಗಳ ಜಾಲಿ ರೈಡ್  ಗೆ ಕಣ್ಮುಚ್ಚಿಕೊಂಡ ಜನ

Lover
Photo Credit :

ಚಾಮರಾಜನಗರ: ಪ್ರೀತಿ ಪ್ರೇಮದ ಅಮಲಿನಲ್ಲಿದ್ದ ಪ್ರೇಮಿಗಳು ಥೇಟ್ ಸಿನಿಮಾ ಶೈಲಿಯಲ್ಲಿ ಬೈಕ್ ನಲ್ಲಿ ಜಾಲಿ ರೈಡ್ ಮಾಡಿದ್ದು ಇದನ್ನು ನೋಡಿದರು ಎಂಥ ಕಾಲ ಬಂತಪ್ಪಾ ಎಂದು ಕಣ್ಮುಚ್ಚಿಕೊಂಡಿದ್ದಾರೆ.

ಇಷ್ಟಕ್ಕೂ ಇಂತಹದೊಂದು ಜಾಲಿ ರೈಡ್ ನಡೆದಿದ್ದು ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ. ಸಾಮಾನ್ಯವಾಗಿ ಪ್ರೀತಿ ಮಾಡೋವಾಗ ಜಗವೇ ಕತ್ತಲು ಎಂಬ ಮಾತಿದೆ. ಅದೇ ರೀತಿಯಲ್ಲಿಯೇ ಜಾಲಿರೈಡ್ ನಡೆದಿದೆ.

ಇಬ್ಬರು ಪ್ರೇಮಿಗಳು ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಜಾಲಿ ರೈಡ್ ಹೋಗಿದ್ದಾರೆ. ಆದರೆ, ವಿಷ್ಯ ಅದಷ್ಟೇ ಆಗಿದ್ದರೆ ಇದೆಲ್ಲ ಪೀಠಿಕೆ ಹೇಳುವಂತೆ ಇರಲಿಲ್ಲ. ಆದರೆ ಆ ಜಾಲಿ ರೈಡ್ ಹೇಗಿತ್ತೆಂದರೆ, ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಎದುರಾಗಿ ಕೂರಿಸಿಕೊಂಡು ಬೈಕ್ ಓಡಿಸುತ್ತಿದ್ದರೆ ಆಕೆ ಆತನನ್ನು ಬಿಗಿಯಾಗಿ ಅಪ್ಪಿ ಉನ್ಮಾನದಲ್ಲಿ ತೇಲುತ್ತಿದ್ದಳು. ಇದು ನೋಡಿದವರು ಇವರಿಗೇನು ಬಂತು ಎಂದು ಹಿಡಿ ಶಾಪ ಹಾಕುತ್ತಿದ್ದರು.

ಗುಂಡ್ಲುಪೇಟೆ ರಸ್ತೆಯಲ್ಲಿ ಪಲ್ಸರ್ ಬೈಕ್ನಲ್ಲಿ ಹೊರಟಿದ್ದ ಈ ಜೋಡಿ ಜಗತ್ತನ್ನೇ ಮರೆತು ಪ್ರೇಮಲೋಕದಲ್ಲಿ ಮುಳುಗಿದ್ದರು. ರಸ್ತೆ ಮೇಲೆ ಬಸ್, ಲಾರಿಯಂತಹ ಯಾವುದೇ ವಾಹನ ಬಂದರೂ ಲೆಕ್ಕಿಸದೇ ಇಬ್ಬರೂ ಜಾಲಿಯಾಗಿ ರೈಡ್ ಮಾಡಿದ್ದಾರೆ.

ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿ ತನ್ನ ಪ್ರಿಯಕರನನ್ನು ತಬ್ಬಿಕೊಂಡು ಚುಂಬಿಸುತ್ತಿರುವ ದೃಶ್ಯವೂ ನಡೆಯಿತು. ಈ ಪ್ರೇಮಿಗಳ ಪ್ರಣಯದಾಟವನ್ನು ದಾರಿಹೋಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬೈಕ್ ಚಾಮರಾಜನಗರದ್ದೇ ನೋಂದಣಿ ಸಂಖ್ಯೆ ಹೊಂದಿದ್ದು, ಇದು ಯಾವ ಊರಿನ ಪ್ರೇಮಿಗಳು ಎಂಬುದು ಗೊತ್ತಾಗ ಬೇಕಿದೆ.

ಇಷ್ಟಕ್ಕೂ ಸಾರ್ವಜನಿಕ ಸ್ಥಳದಲ್ಲಿ ಇದೆಲ್ಲಾ ಬೇಕಿತ್ತಾ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು