News Karnataka Kannada
Wednesday, April 24 2024
Cricket
ಚಾಮರಾಜನಗರ

ದಿಂಬಂನಲ್ಲಿ  ಗಂಟೆಗಟ್ಟಲೆ ಟ್ರಾಫಿಕ್ ಜಾಮ್

Nagar
Photo Credit :

ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ಪಕ್ಕದ ದಿಂಬಂ ಬೆಟ್ಟದ ಕೊಂಡೈ ಉಚ್ಚಿ ತಿರುವಿನಲ್ಲಿ ಕಂಟೈನರ್ ಲಾರಿ ಕೆಟ್ಟು ನಿಂತಿದ್ದರಿಂದ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ನಾಲ್ಕು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.  ನಂತರ ಕ್ರೇನ್ ಕರೆಸಿ ಕಂಟೈನರ್ ಲಾರಿಯನ್ನು ಹೊರತೆಗೆದು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಚಾಮರಾಜನಗರ ಜಿಲ್ಲೆಯಸಮೀಪದ ದಿಂಬಂ ನ   27 ಅಂಕುಡೊಂಕಾದ ತಿರುವುಗಳಿರುವ  ದಟ್ಟ ಅರಣ್ಯವಾಗಿದೆ. ಸತ್ಯಮಂಗಲ-ಮೈಸೂರು ರಾಷ್ಟ್ರೀಯ ಹೆದ್ದಾರಿ ತಿಮ್ಮಪ್ಪನ ಬೆಟ್ಟದ ಹಾದಿಯಲ್ಲಿ ಹಾದು ಹೋಗುತ್ತದೆ.  ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಈ ಹಂತದಲ್ಲಿ ಕೊಯಮತ್ತೂರಿನಿಂದ ಭಾರೀ ಭಾರ ಹೊತ್ತ ಕಂಟೈನರ್ ಲಾರಿಯೊಂದು ದಿಂಬಂ ಘಾಟ್ ಮೂಲಕ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು.  ಇದರಿಂದ ಮಂಗಳವಾರ ಬೆಳಗ್ಗೆಯಿಂದ ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಯಾವುದೇ ವಾಹನಗಳು ಸಂಚರಿಸಲಾಗದೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಬಳಿಕ ಕ್ರೇನ್ ಕರೆಯಿಸಿ ಕಂಟೈನರ್ ಲಾರಿಯನ್ನು ಬದಿಗೆ ಹಾಕುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು