News Karnataka Kannada
Friday, April 12 2024
Cricket
ಚಾಮರಾಜನಗರ

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 3ಸಾವಿರ ಮಾದರಿ ಶಾಲೆ ಆರಂಭ:ಸಚಿವ ಬಿ.ಸಿ.ನಾಗೇಶ್

Bc Nagesh.
Photo Credit :

ಬೆಂಗಳೂರು : ರಾಜ್ಯದಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ವರ್ಷವೇ 3 ಸಾವಿರ ಮಾದರಿ ಶಾಲೆಗಳನ್ನು ಮಾರ್ಪಾಟು ಮಾಡಿ ತರಗತಿ ಆರಂಭಿಸುವ ಆಲೋಚನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್‌ ಹೇಳಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಶಾಲೆ ಉಳಿಸಿ: ಕನ್ನಡ ಬೆಳೆಸಿ’ ಕುರಿತು ದುಂಡು ಮೇಜಿನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷದಿಂದಲೇ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದರು.

ಮಾದರಿ ಶಾಲೆಗಳು ಎಂದರೆ ವಿಶೇಷತೆ ಇರುವುದಿಲ್ಲ. ಇರುವಂತಹ‌ ಸವಲತ್ತುಗಳನ್ನು ಬಳಸಿಕೊಳ್ಳಲಾಗುವುದು. ಶಾಲೆಗಳಲ್ಲಿ ತರಗತಿಗಳು ಇರುವಷ್ಟು ಕೊಠಡಿ ಹಾಗೂ ಶಿಕ್ಷಕರನ್ನು ಒದಗಿಸಲಾಗುತ್ತದೆ. ಇಂಗ್ಲಿಷ್‌ ಕಲಿಕೆ ಬಗ್ಗೆ ಪ್ರತ್ಯೇಕ ತರಗತಿ ಇರಲಿದೆ. ನ್ಪೋಕನ್‌ ಇಂಗಿಷ್‌ ಕಲಿಕೆಗಾಗಿಯೇ ವಿಶೇಷ ಶಿಕ್ಷಕರು ಮಾದರಿ ಶಾಲೆಯಲ್ಲಿ ಇರಲಿದ್ದಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು