News Karnataka Kannada
Sunday, April 14 2024
Cricket
ಚಾಮರಾಜನಗರ

ಗುಂಡ್ಲುಪೇಟೆ: ಕಾರು-ಬುಲೆಟ್ ಡಿಕ್ಕಿ, ಸವಾರ ಸಾವು

Gundlu
Photo Credit :

ಗುಂಡ್ಲುಪೇಟೆ:  ಬುಲೆಟ್ ಮತ್ತು ಕಾರು ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಗೆ ಬೆಂಕಿ ತಗುಲಿ ಉರಿದಿದ್ದಲ್ಲದೆ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766ರ  ಬೇಗೂರು ಠಾಣಾ ಸರಹದ್ದಿನ ವ್ಯಾಪ್ತಿಯ ತಗ್ಗಲೂರು ಬಳಿ ನಡೆದಿದೆ.

ಮೃತಪಟ್ಟ ಸವಾರ ಕೇರಳ ಮೂಲದ  ಜಾರ್ಜ್ ಕುಟ್ಟಿ ಜೇಮ್ಸ್(28) ಎಂದು ಗುರುತಿಸಲಾಗಿದ್ದು, ದೇಹವನ್ನು ಬೇಗೂರು ಆಸ್ಪತ್ರೆ ಯ ಶವಾಗಾರದಲ್ಲಿರಿಸಲಾಗಿದೆ.

ಕಾರಿನಲ್ಲಿದ್ದವರು ಕನಕಪುರದ ಯುವ ಜೋಡಿಗಳಾಗಿದ್ದು, ಕನಕಪುರದಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸುತ್ತಿದ್ದರು ಎನ್ನಲಾಗಿದ್ದು, ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣಾ ವ್ಯಾಪ್ತಿಯ ತಗ್ಗಲೂರು ಬಳಿ ಬುಲೆಟ್ ಮತ್ತು  ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ಪರಿಣಾಮ ಬುಲೆಟ್ ಗೆ ಬೆಂಕಿ ತಗುಲಿದೆ. ಗಂಭೀರ ಗಾಯಗೊಂಡ ಸವಾರ ಜೇಮ್ಸ್ ಸಾವನ್ನಪ್ಪಿದರೆ, ಕಾರಿನಲ್ಲಿದ್ದವರಿಗೆ ಅಪಘಾತದಿಂದ ತೀವ್ರ ಗಾಯಗಳಾಗಿದ್ದು  ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು