News Karnataka Kannada
Wednesday, April 24 2024
Cricket
ಚಾಮರಾಜನಗರ

ಖಾಸಗಿ ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ

New Born Baby
Photo Credit :

ಚಾಮರಾಜನಗರ:  ಜಿಲ್ಲೆಯ ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆಸನದ ಬ್ಯಾಗ್‌ನಲ್ಲಿ  ನವಜಾತ ಶಿಶುವನ್ನು ಇಟ್ಟು ಹೋಗಿರುವ ಘಟನೆ ನಡೆದಿದೆ.

ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಯಾರೋ ಬ್ಯಾಗ್‌ವೊಂದರಲ್ಲಿ ತಮಗೆ ಬೇಡವಾದ ಮಗುವನ್ನು ಇಟ್ಟು ಹೋಗಿದ್ದಾರೆ. ಹಲವಾರು ಗಂಟೆಗಳ ನಂತರ ಬ್ಯಾಗ್ ಬಳಿ ಯಾರೂ ಇರಲಿಲ್ಲ. ಬ್ಯಾಗ್ ಅಲುಗಾಡಿದನ್ನು ಕಂಡ ಸಾರ್ವಜನಿಕರು ಬ್ಯಾಗ್ ತೆರೆದು ನೋಡಿದಾಗ ಹಸಗೂಸು ಇರುವುದು ಪತ್ತೆಯಾಯಿತು.

ಕೂಡಲೇ ಹನೂರು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿ ಬ್ಯಾಗ್ ಸಮೇತ ಮಗುವನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

ಮುದ್ದಾದ ಮಗುವನ್ನು ಸಾಕಲು ಸಾರ್ವಜನಿಕರು ಮುಂದೆ ಬಂದಿದ್ದು, ಪೊಲೀಸರು ಯಾವ ರೀತಿ ಕ್ರಮಕೈಗೊಳ್ಳುವರು ಎನ್ನುವುದು ಕಾದು ನೋಡಬೇಕಾಗಿದೆ. ಅನೈತಿಕ ಸಂಬಂಧದಿಂದ ಮಗು ಜನಿಸಿರಬೇಕು ಎಂದು ಶಂಕೆ ವ್ಯಕ್ತವಾಗುತ್ತಿದ್ದು, ಮರ್ಯಾದೆಗೆ ಅಂಜಿ ಮಗುವನ್ನು ತೊರೆದಿರಬೇಕು ಎನ್ನಲಾಗುತ್ತಿದೆ.

ಹನೂರು ಪೊಲೀಸರು ಬ್ಯಾಗ್‌ನಲ್ಲಿ ಮಗು ತಂದಿಟ್ಟ ವ್ಯಕ್ತಿಗಳ ಪತ್ತೆಗೆ ಮುಂದಾಗಿದ್ದು, ಖಾಸಗಿ ಬಸ್ ನಿಲ್ದಾಣದ ಸುತ್ತ ಮುತ್ತಲಿನ ಸಿಸಿ ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು