News Karnataka Kannada
Friday, April 19 2024
Cricket
ಚಾಮರಾಜನಗರ

ಕ್ರೀಡೆ -ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖ

Piriya
Photo Credit :

ಪಿರಿಯಾಪಟ್ಟಣ: ಕ್ರೀಡೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ವಿಧಾನ ಪರಿಷತ್ ಸದಸ್ಯ  ಸಿ.ಎನ್. ಮಂಜೇಗೌಡ ತಿಳಿಸಿದರು.

ಪಿರಿಯಾಪಟ್ಟಣ ಚಿಟ್ಟೆನಹಳ್ಳಿಯಲ್ಲಿರುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ಜನ ಪ್ರತಿನಿಧಿಗಳ  ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ಮನುಷ್ಯ ದೈಹಿಕವಾಗಿ ಸದೃಢವಾಗಿರಲು ಸಹಾಯಕವಾದರೆ, ಸಂಸ್ಕೃತಿ ಮನುಷ್ಯನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. 2007ರಲ್ಲಿ ಪ್ರಾರಂಭವಾದ  ಈ ಸಂಘವು ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.

ಒಂದು ಸಂಘ ಅಥವಾ ಮನುಷ್ಯ ಯಶಸ್ವಿಯಾಗಿ ನಡೆಯಬೇಕಾದರೆ ಸಮಯ ಪ್ರಜ್ಞೆ ಹಾಗೂ ಉತ್ತಮವಾದ ಮಾತುಗಳು ಬಹಳ ಮುಖ್ಯ. ನಾನು ಸಹ ಬಹಳ ಬಡತನದಿಂದ ಬಂದವನು ನಮ್ಮ ತಾಯಿ ನನ್ನನ್ನು ಮದುವೆ ಮನೆಗಳಿಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಕೆಲವು ಸಮಯದಲ್ಲಿ ನಮ್ಮನ್ನು ಆಮೇಲೆ ಬನ್ನಿರಿ ಎಂದು ಹೇಳಿದ್ದು ಉಂಟು ಆದರೆ ಆ ಹಸಿವು ಬಡತನ ನನಗೆ ಚೆನ್ನಾಗಿ ಪಾಠ ಕಲಿಸಿದೆ.

ನನ್ನ ಸಮಯ ಪ್ರಜ್ಞೆ ಹಾಗೂ ಉತ್ತಮ ಮಾತುಗಳಿಂದ ಇಂದು ಒಬ್ಬ ಜನಪ್ರತಿನಿಧಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನಾನು ನನ್ನ ಶಾಸಕರ ಅನುದಾನದಲ್ಲಿ ನಿಮ್ಮ ಸಂಘಕ್ಕೆ 5 ಲಕ್ಷ ರೂ.ಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಮಹಾದೇವ್ ಮಾತನಾಡಿ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘ ರಾಜಕೀಯದಿಂದ ಮುಕ್ತವಾಗಿರಬೇಕು ಇನ್ನೂ ನಾಲ್ಕೈದು ಎಕರೆ ಅಕ್ಕಪಕ್ಕದ ಜಾಗವನ್ನು ಖರೀದಿಸಿ ಉತ್ತಮವಾಗಿ ಬೆಳೆಸಿ. ನಾನು ನಿಮ್ಮ ಸಂಘದಲ್ಲಿ ಸದಸ್ಯನಾಗಲೂ ಬಯಸುವುದಿಲ್ಲ  ನನ್ನ ಶಾಸಕರ ಅನುದಾನದಲ್ಲಿ 10 ಲಕ್ಷಗಳನ್ನು ನೀಡುತ್ತೇನೆ. ಹಾಗೂ ರಸ್ತೆ ಕಾಮಗಾರಿಯನ್ನು ಮಾಡಿಸಿಕೊಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಮೈಮೂಲ್ ಅಧ್ಯಕ್ಷ ಪ್ರಸನ್ನ, ನಿರ್ದೇಶಕ ಕುಮಾರ್, ಸಂಘದ ಅಧ್ಯಕ್ಷ ಕೆ.ರಮೇಶ್, ಉಪಾಧ್ಯಕ್ಷ ಪೊನ್ನಪ್ಪ, ಖಜಾಂಚಿ ಮಲ್ಲಿಕಾರ್ಜುನ, ಕಾರ್ಯದರ್ಶಿ ವಿಜಯ್ ಸಿ.ಎನ್, ಸಹಕಾರ್ಯದರ್ಶಿ ಹರೀಶ್ ನಿರ್ದೇಶಕರಾದ ಭುಜಂಗ,  ಜ್ಯೋತಿಗೌಡ, ಕೆಂಪಣ್ಣ, ಸಂತೋಷ್, ಗೌರೀಶ್, ಮೋಹನ್, ವಿನೋದ, ವಿನೋದ್‌ಕುಮಾರ್, ಬಿ.ಆರ್. ಗಣೇಶ್, ಡಿ.ಜೆ.ಗಣೇಶ್ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು