Ad

ಚಲಿಸುತ್ತಿದ್ದ ಸಾರಿಗೆ ಬಸ್ಸಿನ ಬ್ರೇಕ್ ಫೇಲ್ಯೂರ್: ಚಾಲಕನ ಜಾಗೃತಿಯಿಂದ ತಪ್ಪಿದ ಭಾರಿ ಅನಾಹುತ!

ಬೇಗೂರಿನಿಂದ ನಂಜನಗೂಡು ತಾಲ್ಲೂಕಿನ ಕೊತ್ತನಹಳ್ಳಿ ಗ್ರಾಮದ ಮಾರ್ಗವಾಗಿ ಹೆಚ್. ಡಿ ಕೋಟೆಗೆ ತೆರಳುತ್ತಿದ್ದ ಸಾರಿಗೆ ಬಸ್ಸಿನ ಬ್ರೇಕ್ ಫೇಲ್ಯೂರ್ ಆಗಿ ಚಾಲಕನ ಜಾಗೃತಿಯಿಂದ ಭಾರಿ ಅನಾಹುತ ತಪ್ಪಿದ ಘಟನೆ ನಂಜನಗೂಡಿನ ದೇವರಾಯಶೆಟ್ಟಿಪುರ ಬಳಿ ನಡೆದಿದೆ.

ನಂಜನಗೂಡು: ಬೇಗೂರಿನಿಂದ ನಂಜನಗೂಡು ತಾಲ್ಲೂಕಿನ ಕೊತ್ತನಹಳ್ಳಿ ಗ್ರಾಮದ ಮಾರ್ಗವಾಗಿ ಹೆಚ್. ಡಿ ಕೋಟೆಗೆ ತೆರಳುತ್ತಿದ್ದ ಸಾರಿಗೆ ಬಸ್ಸಿನ ಬ್ರೇಕ್ ಫೇಲ್ಯೂರ್ ಆಗಿ ಚಾಲಕನ ಜಾಗೃತಿಯಿಂದ ಭಾರಿ ಅನಾಹುತ ತಪ್ಪಿದ ಘಟನೆ ನಂಜನಗೂಡಿನ ದೇವರಾಯಶೆಟ್ಟಿಪುರ ಬಳಿ ನಡೆದಿದೆ.

Ad
300x250 2

ಹೆಚ್.ಡಿ‌.ಕೋಟೆ ಘಟಕಕ್ಕೆ ಸೇರಿದ ಕೆ.ಎಸ್.ಆರ್.ಟಿ.ಸಿ ಬಸ್ ರಸ್ತೆಯನ್ನು ತಪ್ಪಿ ಸಮೀಪದ ಜಮೀನಿಗೆ ನುಗ್ಗಿದ ಪರಿಣಾಮ ಬಸ್ಸಿನಲ್ಲಿದ್ದ ಸಾರ್ವಜನಿಕರು ಚೀರಾಟ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿಯೂ ಕೂಡ ಯಾವುದೇ ಮರ-ಗಿಡಗಳಿಲ್ಲದ ಕಾರಣ ಸದ್ಯ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಬಸ್ ನಲ್ಲಿ ಸುಮಾರು 35 ಕ್ಕೂ ಹೆಚ್ಚಿನ ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಪಾಣ ಹಾನಿ ಸಂಭವಿಸಿಲ್ಲ. ಚಾಲಕನ ಜಾಗೃತಿ ಚಾಲನೆಗೆ ಬಸ್ಸಿನಿಂದ ಪಾರಾದ ಪ್ರಯಾಣಿಕರು ಶಭಾಷ್ ಗಿರಿ ವ್ಯಕ್ತಪಡಿಸಿದ್ದಾರೆ.

Ad
Ad
Nk Channel Final 21 09 2023
Ad