Bengaluru 30°C

ಹುಲ್ಲಹಳ್ಳಿ ಕಪಿಲಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ, ರಾಂಪುರ ಮುಖ್ಯರಸ್ತೆಯ ಕಪಿಲಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಮೈಸೂರು: ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ, ರಾಂಪುರ ಮುಖ್ಯರಸ್ತೆಯ ಕಪಿಲಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.


ವಿಷಯ ತಿಳಿದು ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 45 ವರ್ಷದ ಅಪರಿಚಿತ ಗಂಡಸಿನ ಶವವು ಮಕಾಡೆಯಾಗಿ ಬಿದ್ದಿದೆ.


ಸುಮಾರು ಐದು ಅಡಿ ಎತ್ತರ, ಕಪ್ಪು ಬಣ್ಣದ ಜರ್ಕಿನ್, ಕಾಫಿ ಬಣ್ಣದ ನಿಕ್ಕರ್, ಬಿಳಿ ಬಣ್ಣದ ತುಂಬುತೋಳಿನ ಶರ್ಟ್ ಧರಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ವ್ಯಕ್ತಿಯು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ವ್ಯಕ್ತಿಯ ಸುಲಿವುಸಿಕ್ಕಲ್ಲಿ ಹುಲ್ಲಹಳ್ಳಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08221-2201111 ಮತ್ತು 9480805866 ಕ್ಕೆ ಕರೆ ಮಾಡುವಂತೆ ಪಿಎಸ್ಐ ಚೇತನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Nk Channel Final 21 09 2023