Bengaluru 21°C
Ad

ಇಂದಿನಿಂದ ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ಜಾತ್ರೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಡೆ ಕಾರ್ತಿಕ ಮಾಸದ ಹಿನ್ನಲೆಯಲ್ಲಿ ನ.23 ರಿಂದ 26ರವರೆಗೆ ನಾಲ್ಕು ದಿನಗಳ ಕಾಲ ಜಾತ್ರೆ ನಡೆಯಲಿದೆ.

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಡೆ ಕಾರ್ತಿಕ ಮಾಸದ ಹಿನ್ನಲೆಯಲ್ಲಿ ನ.23 ರಿಂದ 26ರವರೆಗೆ ನಾಲ್ಕು ದಿನಗಳ ಕಾಲ ಜಾತ್ರೆ ನಡೆಯಲಿದೆ.

Ad

ಜಾತ್ರೆ ಪ್ರಯುಕ್ತ ಶ್ರೀಕ್ಷೇತ್ರ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ದೇವಾಲಯದ ವಿಮಾನ ಗೋಪುರ, ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ ಮತ್ತು ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ನ.23ರಂದು ಆಲಯ ಪ್ರವೇಶ, ಗಣಪತಿ ಪೂಜೆ, ಹೋಮ-ಹವನ, ರುದ್ರಾಭಿಷೇಕ ಪಾರಾಯಣ,

Ad

ನೈವೇದ್ಯ ಮಹಾಮಂಗಳಾರತಿ ಇರಲಿದೆ. ನ.24ರಂದು ಬ್ರಾಹ್ಮಿ ಮುಹೂರ್ತದಲ್ಲಿ ನವರತ್ನನ್ಯಾಸ ವಿಮಾನಕಳಸಸ್ಥಾಪನೆ, ಪ್ರಾಣಪ್ರತಿಷ್ಠೆ, ಪೂರ್ಣಾಹುತಿ ನಂತರ ಮಕರ ಲಗ್ನದಲ್ಲಿ ಮಧ್ಯಾಹ್ನ 12ಕ್ಕೆ ಕುಂಭಾಭಿಷೇಕ, ಮಹಾಮಂಗಳಾರತಿ, ರಾಜೋಪಚಾರ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

Ad

ನ.25ಕ್ಕೆ ಸ್ವಾಮಿ ಅವರಿಗೆ ದೇವಸ್ಥಾನ ಸಮೀಪವಿರುವ ಕೆರೆಯಿಂದ ವಿವಿಧ ಪೂಜೆಗಳನ್ನು ಸಲ್ಲಿಸಿ, ಹಾಲು ಹರವಿ ಸೇವೆ ತೆಗೆದುಕೊಂಡು ದೇವರನ್ನು ದೇವಾಲಯದವರೆಗೂ ಉದ್ಭವಸ್ಥಾನಕ್ಕೆ ಕರೆದೊಯ್ಯಲಾಗುವುದು. ರಾತ್ರಿ ಎಣ್ಣೆಮಜ್ಜನ ಮತ್ತು ಪ್ರಸಾದ ವಿನಯೋಗ ಇರಲಿದೆ. ವೀರಗಾಸೆ ನೃತ್ಯ, ಪೂಜಾ ಕುಣಿತ, ಕೋಲಾಟ, ಕಂಸಾಳೆ ರಸ್ತೆಯ ಮೂಲಕ ನೃತ್ಯ ಪ್ರದರ್ಶನ ನಡೆಯಲಿದೆ.

Ad

ನಂತರ ಕೊಂಡೋತ್ಸವ ಇರಲಿದೆ. 26ಕ್ಕೆ ರುದ್ರಾಕ್ಷಿ ಮಂಟಪ, ಹುಲಿ ವಾಹನ, ನಂದಿಧ್ವಜದೊಂದಿಗೆ ರಥೋತ್ಸವ ಇರಲಿದೆ. ಜಾತ್ರೆಯ ಆರಂಭದ ದಿನವಾದ ನ.23ರಂದು ಪಾನಕ ಪೂಜೆ ಹಾಗೂ ಸಂಜೆ 5ಕ್ಕೆ ವಿವಿಧ ಕಲಾತಂಡಗಳೊಂದಿಗೆ ದೇವರ ಮೆರವಣಿಗೆ ಜರುಗಲಿದೆ.

Ad

ಜಾತ್ರಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸರಗೂರು ಪೊಲೀಸ್ ವೃತ್ತ ನಿರೀಕ್ಷಕ ಎಂ.ಲಕ್ಷ್ಮಿಕಾಂತ್, ಉಪ ನಿರೀಕ್ಷಕ ನಂದೀಶ್‌ ಕುಮಾರ್ ನೇತೃತ್ವದಲ್ಲಿ ಭದ್ರತೆಯಿಂದಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದೆ.

Ad

ನಂಜನಗೂಡು ತಾಲೂಕಿನ ಹೆಡಿಯಾಲದಿಂದ ಹಾದನೂರು ಮಾರ್ಗವಾಗಿ ದೇವಾಲಯದವರೆಗೆ ಹಾಗೂ ದೇವಸ್ಥಾನ ಆವರಣದ ಸುತ್ತ ಬ್ಯಾರಿಕೇಡ್‌ ಗಳನ್ನು ಇರಿಸಿ ವಾಹನ ಹಾಗೂ ಸಾರ್ವಜನಿಕರ ಸುಗಮ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

Ad
Ad
Ad
Nk Channel Final 21 09 2023