ಮೈಸೂರು: ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಅಮೆರಿಕಾ ವೀಸಾ ನಿರಾಕರಿಸಿದೆ.ಅಮೆರಿಕಾದ ಕನ್ನಡ ಕೂಟಗಳು ಆಯೋಜಿಸುವ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು 20 ದಿನಗಳ ಪ್ರವಾಸಕ್ಕಾಗಿ ಅರುಣ್ ಯೋಗಿರಾಜ್ ಕುಟುಂಬ ಸಹಿತ ತೆರಳಲು ಯುಎಸ್‌ಎಗೆ ತೆರಳಲು ಉತ್ಸುಕರಾಗಿದ್ದರು. ಅದಕ್ಕಾಗಿಯೇ ಜೂನ್ನಲ್ಲಿ ವೀಸಾಗೆ ಅರ್ಜಿ ಸಲ್ಲಿಸಿ ಅದಕ್ಕೆ ಬೇಕಾದ ದಾಖಲೆಗಳು, ಪೂರ್ವಾಪರ ಮಾಹಿತಿಗಳು ಹಾಗೂ ಅದಕ್ಕೆ ಬೇಕಾದ ನಿಬಂಧನೆಗಳ ಪೂರ್ಣಗೊಳಿಸಿದರು ಇದೀಗ ವೀಸಾ ನಿರಾಕರಣೆಯಾಗಿದೆ.
ಇನ್ನು ವೀಸಾ ನಿರಾಕರಣೆ ಬಗ್ಗೆ ಮಾತನಾಡಿದ ಅರುಣ್ ಯೋಗಿರಾಜ್ ” ನನ್ನ ವೀಸಾ ಯಾತಕ್ಕಾಗಿ ನಿರಾಕರಣೆಯಾಗಿದೆ ಎಂದು ಗೊತ್ತಿಲ್ಲ. ಈ ವರ್ಷ ವೀಸಾ ನಿರಾಕರಣೆಯಾದ್ದರಿಂದ ಮುಂದಿನ ವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸುವೆ. ವೀಸಾ ನಿರಾಕರಣೆಗೆ ಹಲವು ನಿಯಮ, ನಿಬಂಧನೆಗಳು ಕಾರಣವಾಗಿರಬಹುದು ಎಂದು ಅರಿತಿದ್ದೇನೆ. ಅಲ್ಲಿನ ಕನ್ನಡಿಗರೊಂದಿಗೆ ಭೇಟಿಯಾಗಿ ಅವರೊಂದಿಗೆ ಬೆರೆಯುವ ಉತ್ಸಾಹದಲ್ಲಿದ್ದೆ. ನನ್ನ ಮಕ್ಕಳಿಗೂ ಯುಎಸ್ ನೋಡುವ ಉತ್ಸಾಹದಲ್ಲಿದ್ದರು. ಈಗ ಬೇರೆ ದೇಶಕ್ಕೆ ಕರೆದುಕೊಂಡು ಹೋಗಬೇಕು ಅಂದುಕೊಂಡಿದ್ದೇನೆ” ಎಂದು ಹೇಳಿದರು.