ಮೈಸೂರು: ಅಯೋಧ್ಯೆಯಲ್ಲಿ ರಾಮಲಲ್ಲ ಮೂರ್ತಿ ಪ್ರತಿಷ್ಟಾಪನೆಯಾಗಿ ವರ್ಷ ತುಂಬಿದ ಹಿನ್ನಲೆ. ಮೈಸೂರಿನ ಚಿತ್ರ ಕಲಾವಿದ ಪುನೀತ್ ಸಂಗಡಿಗರಿಂದ ಅದ್ಭುತ ಚಿತ್ರ ಅರಳಿದೆ. ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರಂಗೋಲಿಯಲ್ಲಿ ರಾಮ ಮಂದಿರ ಹಾಗೂ ಹನುಮನ ಚಿತ್ರ ಅರಳಿದೆ.
ಸುಮಾರು 8 ಸಾವಿರ ಚದರ ಅಡಿಯಲ್ಲಿ 700 ಕೆಜಿಗೂ ಹೆಚ್ಚು ರಂಗೋಲಿ ಬಳಸಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸತತ ಮೂರು ದಿನಗಳ ಕಾಲ ರಂಗೋಲಿಯಲ್ಲಿ ಕಲಾವಿದರು ಚಿತ್ರ ಬಿಡಿಸಿದ್ದಾರೆ.