ಮೈಸೂರು : ಕಾಂಕ್ರೀಟ್ ಪಿಲ್ಲರ್ ನಡುವೆ ಸಿಲುಕಿ ಒಂಟಿ ಸಲಗ ಒದ್ದಾಡಿದ ಘಟನೆ ಹುಣಸೂರು ತಾಲೂಕು ಮುದುಗನೂರು ಹೊಸಕೆರೆ ಬಳಿ ನಡೆದಿದೆ. ಜೆಸಿಬಿ ಸಹಾಯದಿಂದ ಒಂಟಿ ಸಲಗ ರಕ್ಷಣೆ ಮಾಡಲಾಗಿದೆ. ಆಹಾರ ಅರಸಿ ಕಾಡಾನೆ ನಾಡಿಗೆ ಬಂದಿತ್ತು . ವಾಪಸ್ ಕಾಡಿಗೆ ತೆರಳುತ್ತಿದ್ದಾಗ ಕಾಂಕ್ರೀಟ್ ಪಿಲ್ಲರ್‌ಗೆ ಆನೆ. ಸಿಲುಕಿಕೊಂಡಿದೆ.
ನಾಗರಹೊಳೆ ಅಭಯಾರಣ್ಯದಿಂದ ಒಂಟಿಸಲಗ ನಾಡಿಗೆ ಬಂದಿತ್ತು. ವಾಪಸ್ಸು ಹೋಗುವ ವೇಳೆ ಆನೆ ತಡೆಗೆ ಹಾಕಿದ್ದ ಕಾಂಕ್ರೀಟ್ ಪಿಲ್ಲರ್‌ಗೆ ಸಿಲುಕಿದೆ. ಸುಮಾರು ಮೂರು ಗಂಟೆಗಳ ಕಾಲ ಹೊರಬರಲಾಗದೆ ಕಾಡಾನೆ ನರಳಿದೆ, ಕಾಡಾನೆ ಕಾಂಕ್ರೀಟ್ ಪಿಲ್ಲರ್‌ಗೆ ಸಿಲುಕಿದ್ದನ್ನ ಕಂಡು ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದರು.
ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕಾಗಮಿಸಿದರು. ಜೆಸಿಬಿ ಯಂತ್ರದ ಸಹಾಯದಿಂದ ಕಾಡಾನೆಯನ್ನು ರಕ್ಷಣೆ ಮಾಡಲಾಯಿತು. ಈ ಹಿಂದೆ ಕಾಡಿನಿಂದ ನಾಡಿಗೆ ಬಂದಿದ್ದ ಒಂಟಿಸಲಗ. ಪದೇ ಪದೇ ಬಂದು ಆನೆ ಬೆಳೆ ನಾಶ ಮಾಡುತ್ತಿತ್ತು.ಈ ಹಿನ್ನೆಲೆಯಲ್ಲಿ ಆನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು.