Bengaluru 17°C

ಮನೆ ಮನೆಗೆ ತೆರಳಿ ಹೆಬ್ಬೆಟ್ಟು ಹಾಕಿಸಿಕೊಳ್ಳುವ ನ್ಯಾಯಬೆಲೆ ಅಂಗಡಿ: ಹುಣಸೂರಿನಲ್ಲೊಂದು ಅಕ್ರಮ!

ಮನೆ ಮನೆಗೆ ತೆರಳಿ ಪಡಿತರದಾರರ ಹೆಬ್ಬೆಟ್ಟು ಹಾಕಿಸಿಕೊಂಡು ನಿಯಮಗಳನ್ನ ಉಲ್ಲಾಂಘಿಸುತ್ತಿರುವ ಪ್ರಕರಣವೊಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಬೆಳಕಿಗೆ ಬಂದಿದೆ.

ಮೈಸೂರು: ಮನೆ ಮನೆಗೆ ತೆರಳಿ ಪಡಿತರದಾರರ ಹೆಬ್ಬೆಟ್ಟು ಹಾಕಿಸಿಕೊಂಡು ನಿಯಮಗಳನ್ನ ಉಲ್ಲಾಂಘಿಸುತ್ತಿರುವ ಪ್ರಕರಣವೊಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಬೆಳಕಿಗೆ ಬಂದಿದೆ. ಹುಣಸೂರು ತಾಲೂಕಿನ ಶ್ಯಾನುಭೋಗನಹಳ್ಳಿಯ ನ್ಯಾಯ ಬೆಲೆ ಅಂಗಡಿ ಸಿಬ್ಬಂದಿ ಪ್ರಶಾಂತ್ ಇಂತಹ ವ್ಯವಸ್ಥೆ ಮಾಡಿಕೊಂಡು ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ.


ಪಡಿತರ ದುರುಪಯೋಗಬಾರದು ಅರ್ಹ ಫಲಾನುಭವಿಗಳಿಗೆ ತಲಪಬೇಕೆಂಬ ನಿಯಮಗಳ ಹಿನ್ನಲೆ ಸರ್ಕಾರ ಹೆಬ್ಬೆಟ್ಟು ಹಾಕಿಸಿಕೊಳ್ಳುವ ವ್ಯವಸ್ಥೆ ಜಾರಿಮಾಡಿದೆ.ಪಡಿತರದಾರ ನ್ಯಾಯಬೆಲೆ ಅಂಗಡಿಗೆ ಬಂದು ಹೆಬ್ಬೆಟ್ಟು ಹಾಕಿ ಪದಾರ್ಥಗಳನ್ನ ತೆಗೆದುಕೊಳ್ಳಬೇಕೆಂಬ ಕಾರಣದಿಂದ ಇಂತಹ ನಿಯಮ ಜಾರಿಯಾಗಿದೆ.


ಆದರೆ ಹುಣಸೂರು ತಾಲೂಕಿನ ಶ್ಯಾನುಭೋಗನ ಹಳ್ಳಿಯಲ್ಲಿರುವ ನ್ಯಾಯಬೆಲೆ ಅಂಗಡಿಯವರು ಗ್ರಾಮಗಳಿಗೆ ತೆರಳಿ ಅರಳಿಮರದ ಕಟ್ಟೆಯಲ್ಲಿ ಕುಳಿತು ಪಡಿತರದಾರರನ್ನ ಕರೆಸಿ ಹೆಬ್ಬೆಟ್ಟು ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ಪಡಿತರ ಮಾತ್ರ ವಿತರಣೆ ಆಗುತ್ತಿಲ್ಲ.ಈ ಬಗ್ಗೆ ಪ್ರಶ್ನಿಸಿದಾಗ ಪಡಿತರದಾರರ ಅನುಕೂಲಕ್ಕಾಗಿ ಮಾಡುತ್ರಿರುವುದಾಗಿ ತಿಳಿಸುತ್ತಿದ್ದಾರೆ.


ಪಡಿತರ ದುರುಪಯೋಗಬಾರದೆಂಬ ಉದ್ದೇಶದಿಂದ ಹೆಬ್ಬೆಟ್ಟು ವ್ಯವಸ್ಥೆ ಜಾರಿ ಮಾಡಿದ್ದರೆ ಈ ನ್ಯಾಯ ಬೆಲೆ ಅಂಗಡಿಯವರು ರಾಜಾರೋಷವಾಗಿ ಈ ವ್ಯವಸ್ಥೆಯನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಈ ಕುರಿತಂತೆ ಪ್ರಶ್ನೆ ಮಾಡುತ್ತಿದ್ದಂತೆಯೇ ಸಿಬ್ಬಂದಿ ಕ್ಷಣಮಾತ್ರದಲ್ಲಿ ಗಂಟು ಮೂಟೆ ಕಟ್ಟಿ ಬೈಕ್ ನಲ್ಲಿ ಓಡಿದ್ದಾನೆ.ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಇಂತಹ ನ್ಯಾಯಬೆಲೆ ಅಂಗಡಿ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.


Nk Channel Final 21 09 2023