Ad

ಚಾಮುಂಡೇಶ್ವರಿ ಭಕ್ತರಿಗೆ 25 ಸಾವಿರ ಮೈಸೂರು ಪಾಕ್ ಸಿದ್ಧ

ಮೊದಲ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನಕ್ಕೆ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಿಗೆ ವಿತರಿಸಲು 25 ಸಾವಿರ ಮೈಸೂರು ಪಾಕ್ ಸಿದ್ಧವಾಗುತ್ತಿದೆ.

ಮೈಸೂರು: ಮೊದಲ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದರ್ಶನಕ್ಕೆ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಿಗೆ ವಿತರಿಸಲು 25 ಸಾವಿರ ಮೈಸೂರು ಪಾಕ್ ಸಿದ್ಧವಾಗುತ್ತಿದೆ.

Ad
300x250 2

ಮೊದಲ ಆಷಾಢ ಶುಕ್ರವಾರದಂದು ಕಳೆದ 19 ವರ್ಷಗಳಿಂದ ಪ್ರಸಾದ ವ್ಯವಸ್ಥೆ ಮಾಡುತ್ತಿರುವ ನೂರಡಿ ರಸ್ತೆಯ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಈ ಬಾರಿಯೂ ಪ್ರಸಾದ ವಿತರಣೆ ಮಾಡುತ್ತಿದೆ.

ಅದಕ್ಕಾಗಿ ಭಕ್ತರಿಗೆ ವಿತರಿಸಲು 25 ಸಾವಿರ ಮೈಸೂರು ಪಾಕ್ ತಯಾರಿಸಲಾಗುತ್ತಿದೆ. ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ 40 ಬಾಣಸಿಗರ ತಂಡದಿಂದ ಮೈಸೂರು ಪಾಕ್ ತಯಾರಿಕೆ ಶುರುವಾಗಿದ್ದು, ಶುಕ್ರವಾರದ ವೇಳೆಗೆ ತಯಾರಿಕೆ ಕಾರ್ಯ ಪೂರ್ಣಗೊಳ್ಳಲಿದೆ.

ಮೈಸೂರು ಪಾಕ್ ತಯಾರಿಕೆಗೆ 200 ಕೆಜಿ ಕಡಲೆ ಹಿಟ್ಟು, 500 ಕೆಜಿ ಸಕ್ಕರೆ, 30 ಕೆಜಿ ರಿಫೈಂಡ್ ಆಯಿಲ್, 100 ಕೆಜಿ ಡಾಲ್ಡಾ ತುಪ್ಪ, 100 ಕೆಜಿ ಬೆಣ್ಣೆ ಕಾಯಿಸಿದ ತುಪ್ಪ, 3 ಕೆಜಿ ಏಲಕ್ಕಿ, 2 ಕೆಜಿ ಅರಿಶಿನ ಬಳಸಲಾಗಿದೆ.

ಬೆಟ್ಟದ ಪಾರ್ಕಿಂಗ್ ಜಾಗದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ ಬೆಳಗ್ಗೆಯಿಂದಲೇ ಪ್ರಸಾದ ವಿತರಣೆ ಆರಂಭವಾಗಲಿದೆ. ಅಂದು ಬೆಳಗ್ಗೆ ಉಪಹಾರಕ್ಕೆ ಪೊಂಗಲ್, ಇಡ್ಲಿ, ಚಟ್ನಿ ನೀಡಲಾಗುತ್ತದೆ. ಹನ್ನೊಂದು ಗಂಟೆಯ ಊಟಕ್ಕೆ ಪಲ್ಯ, ಕೋಸಂಬರಿ, ಬಿಸಿಬೇಳೆ ಬಾತ್, ಅನ್ನ ಸಾಂಬಾರ್, ಮೊಸರು, ಲಾಡು, ಮೈಸೂರು ಪಾಕ್ ವಿತರಿಸಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸೇವಾರ್ಥದಾರರಲ್ಲಿ ಒಬ್ಬರಾದ ನಾಗೇಶ್ ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad