Categories: ಮೈಸೂರು

ಸಿಎಂ ಆಪ್ತ ಮರೀಗೌಡ ಸಂಬಂಧಿಗೆ ಸೇರಿದ ಬಾರ್ ಲೈಸೆನ್ಸ್ ರದ್ದು

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮರೀಗೌಡ ಅವರ ಸಂಬಂಧಿಗೆ ಸೇರಿದೆ ಎನ್ನಲಾಗಿದ್ದ ಬಾರ್ ಲೈಸೆನ್ಸ್ ವೊಂದನ್ನು ರದ್ದು ಮಾಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಚಿತ್ರವನ ರೆಸಾರ್ಟ್ ಗೆ ನೀಡಿದ್ದ ಬಾರ್ ಲೈಸೆನ್ಸನನ್ನು ನವೀಕರಿಸಲು ಅವಕಾಶ ನೀಡದ ಶಿಖಾ ಅವರು ಲೈಸೆನ್ಸ್ ನನ್ನು ರದ್ದುಗೊಳಿಸಿದ್ದರು.  ಅದ್ದರಿಂದ ಮರೀಗೌಡ ಅವರು ಜಿಲ್ಲಾಧಿಕಾರಿಯ ವಿರುದ್ಧ ಸಿಡಿದೆದ್ದಿದ್ದರು. ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಚಿತ್ರವನ್ನು ರೆಸಾರ್ಟ್ ರಾಜ್ಯ ಹೆದ್ದಾರಿಯ ಸಮೀಪದಲ್ಲಿ. ಅಬಕಾರಿ ಕಾಯ್ದೆ ನಿಯಮದ ಪ್ರಕಾರ ರೆಸಾರ್ಟ್ ಗಳು ಹಾಗೂ ಬಾರ್ಗಳು ಹೆದ್ದಾರಿಯಿಂದ 220 ಮೀಗಳಿಂದ ದೂರ ಇರಬೇಕು. ಆದರೆ, ಈ ರೆಸಾರ್ಟ್ ರಾಜ್ಯ ಹೆದ್ದಾರಿ ಸಮೀಪದಿಂದ ಸುಮಾರು 20 ರಿಂದ 30 ಮೀ ವ್ಯಾಪ್ತಿಯಲ್ಲಿದ್ದ ಕಾರಣ ಸಿವಿಲ್-7 ಲೈಸೆನ್ಸ್ ನೀಡಲು ಅವಕಾಶ ಇರಲಿಲ್ಲ. ಹೀಗಿದ್ದರೂ ನಿಯಮ ಮೀರಿ ಲೈಸೆನ್ಸ್ ನ್ನು ಪಡೆದು ರೆಸಾರ್ಟ್ ನಡೆಸಲಾಗುತ್ತಿತ್ತು.

ಅದ್ದರಿಂದ 2016-17ನೇ ಸಾಲಿಗೆ ಲೈಸೆನ್ಸ್ ನವೀಕರಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಈ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮರೀಗೌಡ ಅವರು ಲೈಸೆನ್ಸ್ ಮಾಡಿಕೊಂಡುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿದ್ದರು. ಒತ್ತಡಕ್ಕೆ ಮಣಿಯದ ಜಿಲ್ಲಾಧಿಕಾರಿ ಶಿಖಾ ಅವರು ಲೈಸೆನ್ಸ್ ನವೀಕರಣ ಮಾಡದೆ ಸಿವಿಲ್-7 ರದ್ದು ಪಡಿಸಿ ಆದೇಶ ಹೊರಡಿಸಿದ್ದರು.

ಇದರಿಂದ ತುಂಬಾ ಕೋಪಗೊಂಡಿದ್ದ ಮರೀಗೌಡ ಹಾಗೂ ಅವರ ಬೆಂಬಲಿಗರು ತಹಸೀಲ್ದಾರ್ ರನ್ನು ಬಿಡುಗಡೆ ಮಾಡುತ್ತಿಲ್ಲ ಎಂಬ ಕುಂಡುನೆಪ ಒಡ್ಡಿ ಜಿಲ್ಲಾಧಿಕಾರಿಗಳ ವಿರುದ್ಧ ಏಕವಚನದಲ್ಲಿ ನಿಂದಿಸಿದ್ದರು ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿಯ ಆಪ್ತನೆಂಬ ಸದವಕಾಶವನ್ನು ಬಳಸಿಕೊಂಡು ಮರೀಗೌಡ ನಡೆಸುತ್ತಿರುವ ಅಕ್ರಮಗಳು ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಇದಲ್ಲದೆ, ಮರೀಗೌಡ ಅವರು, 32 ವರ್ಷಗಳ ಹಿಂದೆ ತಮ್ಮ ಮಾತನ್ನು ಕೇಳದ ಕಾರಣ ಮೈಸೂರು ತಾಲೂಕಿನ 8 ಕಾರ್ಯನಿರ್ವಾಹಕ ಅಧಿಕಾರಿಗಳನ್ನು ತಮ್ಮ ಪ್ರಭಾವದಿಂದ ವರ್ಗಾವಣೆ ಮಾಡಿದ್ದಾರೆಂದು ಆರೋಪಿಸಿದ್ದರು. ಅಲ್ಲದೆ, ತಮ್ಮದೇ ಅಧಿಕಾರ ನಡೆಯುವ ಸಲುವಾಗಿ ಪೊಲೀಸ್ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸೇರಿಸಿ ತಮ್ಮ ನಿವಾಸದಲ್ಲಿ ಅಕ್ರಮವಾಗಿ ಸಭೆಯೊಂದನ್ನು ಏರ್ಪಡಿಸಿ ಮಾತುಕತೆ ನಡೆಸಿದ್ದಾರೆಂದು ಹೇಳಿಕೊಂಡಿದ್ದರು.

Desk

Recent Posts

30 ಕೋಟಿ ರೂ. ನಗದು ಪತ್ತೆ: ಸಚಿವ ಆಲಂಗೀರ್​ ಆಪ್ತ ಸಂಜೀವ್​ ಲಾಲ್ ಬಂಧನ

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾರ್ಖಂಡ್​ನ ಸಚಿವ ಆಲಂಗೀರ್ ಆಲಮ್​ ಆಪ್ತ ಸಂಜೀವ್​ ಲಾಲ್ ಅವರನ್ನು ಬಂಧಿಸಿದ್ದಾರೆ. ಜಾರ್ಖಂಡ್ ಸಚಿವ ಅಲಂಗೀರ್…

28 seconds ago

ಅಹಮದಾಬಾದ್‌ನಲ್ಲಿ ಮತದಾನ ಮಾಡಿದ ಪ್ರಧಾನಿ ಮೋದಿ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಎಂದರೆ ಮಂಗಳವಾರ ನಡೆಯುತ್ತಿದೆ. ದೇಶದ 93 ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು…

19 mins ago

ಆರ್ಭಟಿಸಿ ಬಂದ ಮಳೆಗೆ ಸಿಡಿಲು ಬಡಿದು ಆರು ಮಂದಿ ಬಲಿ

ನೆನ್ನ ದೇಶದ ಹಲವೆಡೆ ಧಾರಕಾರ ವಾಗಿ ಮಳೆ ಸುರಿದಿದೆ. ಬಹಳ ದಿನಗಳ ನಂತರ ವರುಣ ಭೂಮಿಗೆ ತಂಪೆರದಿದ್ದಾನೆ. ಆದರೆ ಬಂಗಾಳದಲ್ಲಿ…

44 mins ago

ಮಕ್ಕಳಾಗದ ದಂಪತಿಗೆ ಗುಡ್ ನ್ಯೂಸ್ : ಐವಿಎಫ್‌ ಈಗ ಸರ್ಕಾರಿ ಆಸ್ಪತ್ರೆಯಲ್ಲೂ ಲಭ್ಯ

ಹಲವು ದಂಪತಿಗಳಿಗೆ ಮಕ್ಕಳ್ಳಿಲ್ಲದ ಕೊರತೆ ಕಾಡುತ್ತಿವೆ. ಕೆಲವು ದಂಪತಿಗಳು ಹರಕೆ ಹೊರುತ್ತಾರೆ ಇನ್ನೂ ಕೆಲವರು ಐವಿಎಫ್ ನಂತಹ ಚಿಕಿತ್ಸೆ ಮೊರೆ…

1 hour ago

ದೇಶದ 93 ಲೋಕಸಭಾ ಕ್ಷೇತ್ರಗಳಲ್ಲಿ 3ನೇ ಹಂತದ ಮತದಾನ ಶುರು

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡಿದೆ. ದೇಶಾದ್ಯಂತ ಇಂದು 93 ಲೋಕಸಭಾ ಸ್ಥಾನಗಳಿಗೆ…

2 hours ago

ಬೆಳಗ್ಗೆ ಖಾಲಿ ಹೊಟ್ಟೆಗೆ ಹಣ್ಣಿನ ಜ್ಯೂಸ್ ಕುಡಿಯಬಾರದು ಯಾಕೆ?

ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಹಣ್ಣಿನ ರಸಗಳನ್ನು ಸೇವಿಸಿದರೆ ಇದರಿಂದ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಥಟ್ಟನೇ ಏರುವುದು,…

2 hours ago