ಮೈಸೂರು : ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಜಿರಾಫೆ ಮರಿಯೊಂದು ಜನನವಾಗಿದ್ದು, ಈ ಮೂಲಕ ಮೈಸೂರು ಮೃಗಾಲಯವು ಈವರೆಗೂ 22 ಜಿರಾಫೆಗಳು ಜನಿಸಿದ ಮೃಗಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ.
ಜು.17ರಂದು ಮೈಸೂರು ಮೃಗಾಲಯದ ಲಕ್ಷ್ಮೀ ಮತ್ತು ಭರತ್ ಎಂಬ ಜಿರಾಫೆಗಳಿಗೆ ನಾಲ್ಕನೆಯ ಮಗುವಾಗಿ ಈ ಗಂಡು ಜಿರಾಫೆ ಜನಿಸಿದೆ. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.ಈವರೆಗೂ ಮೈಸೂರು ಮೃಗಾಲಯದಲ್ಲಿ 22 ಜಿರಾಫೆ ಮರಿಗಳು ಜನಿಸಿವೆ. ಈ ಪೈಕಿ 17 ಗಂಡು ಮರಿಗಳಾದರೆ 5 ಹೆಣ್ಣು ಮರಿಗಳು. ಪ್ರಸ್ತುತ ಜನಿಸಿರುವ ಜಿರಾಫೆ 22ನೇಯದ್ದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.